ಫಾರಿನ್​ಗೆ ಹೋಗೋದಕ್ಕೆ ಬೆಂಗಳೂರು ಯುೂನಿವರ್ಸಿಟಿ ಮಾರ್ಕ್ಸ್​ ಕಾರ್ಡೇ ವೀಸಾ?

ಬೆಂಗಳೂರು: ಫಾರಿನ್​ಗೆ ಹೋಗೋದಕ್ಕೆ ಬೆಂಗಳೂರು ಯೂನಿವರ್ಸಿಟಿ ಮಾರ್ಕ್ಸ್​ ಕಾರ್ಡೇ ವೀಸಾ ಆಗ್ತಿದ್ಯಾ? ಇಂತಹದ್ದೊಂದು ಪ್ರಶ್ನೆ ಕೇಳೋದಕ್ಕೆ ಕಾರಣ ಸಿಲಿಕಾನ್​ ಸಿಟಿ ಪೊಲೀಸರು ಬಂಧಿಸಿರುವ ವಿದೇಶಿ ಪ್ರಜೆ ನಯೀಮ್​ ಸಯೀದ್​ ಅಲೆಕ್ಸ್​.
ಈತನ ವೀಸಾ ಅವಧಿ ಕಳೆದ ವರ್ಷ ಆಗಸ್ಟ್​ಗೆ ಮುಗಿದುಹೋಗಿದೆ. ಇತ್ತೀಚೆಗೆ ಅಕ್ರಮ ವಿದೇಶಿಗರ ಮೇಲೆ ಪೊಲೀಸರು ದಾಳಿ ನಡೆಸ್ತಿರುವ ಹಿನ್ನೆಲೆಯಲ್ಲಿ ಈತನ ತನ್ನ ದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾನೆ. ಅದಕ್ಕಾಗಿ ಓವರ್​ ಸ್ಟೇ ಮಾಡಿದ ವಿದೇಶಿಯರಿಗೆ ನೀಡುವ ಎಕ್ಸಿಟ್​ ಪರ್ಮಿಟ್​ಗಾಗಿ ಫಾರಿನರ್ಸ್​ ರೀಜಿನಲ್​​ ರಿಜಿಸ್ಟ್ರೇಷನ್​ ಆಫೀಸ್​ಗೆ ಆನ್​ಲೈನನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ವಿಚಾರಣೆ ವೇಳೆ, ಈತ ಸಲ್ಲಿಸಿದ್ದ ಪದವಿ ಪ್ರಮಾಣ ಪತ್ರ ನಕಲಿ ಅಂತಾ ಗೊತ್ತಾಗಿದೆ. ತಕ್ಷಣ ಅಧಿಕಾರಿಗಳು ಪೊಲೀಸ್ರಿಗೆ ವಿಷ್ಯ ತಿಳಿಸಿದ್ದಾರೆ. ಇನ್ನೂ ಮಾಹಿತಿ ಪಡೆದ ಪೊಲೀಸ್ರು ಇದೀಗ ಸಯೀದ್​ನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv