ಹುಡುಗಿ ಕೈ ಕೊಟ್ಲು ಅಂತಾ ಸ್ಕೂಲಿಗೇ ಬೆಂಕಿ ಇಟ್ಟ ಈ ಹುಚ್ಚು ಪ್ರೇಮಿ

ಬೆಳಗಾವಿ: ಪ್ರೀತಿ ಅಂದ್ರೇನೇ ಹಾಗೆ ಅದೊಂತರಾ ಮಾಯೇ ಯಾರಿಂದ ಏನು ಬೆಕಾದ್ರೂ ಮಾಡಿಸುತ್ತೆ. ಇನ್ನು ಪ್ರೀತಿಸಿದ ಹುಡುಗಿ ಕೈ ಕೊಟ್ಲು ಅಂತಾ ಗಡ್ಡಾ ಬಿಟ್ಟು ದೇವದಾಸ್​ ಆದೋರ್ನ ನೋಡಿದ್ದೀರಾ. ಇಲ್ಲಾ ಫೀಲಿಂಗಲ್ಲಿ ಆತ್ಮಹತ್ಯೆ ಮಾಡ್ಕೊಂಡೋರ್ನಾ, ಅಥವ ಕೈ ಕೊಟ್ಟ ಹುಡುಗಿ ಹೆಸರನ್ನ ಲೈಫ್ ಲಾಂಗ್ ಪಾಸವರ್ಡ್​​ ಮಾಡಿಕೊಂಡಿರೋರನ್ನೂ ನೋಡಿರ್ತೀರಾ. ವಿಚಿತ್ರ ಅಂದ್ರೆ ಇಲ್ಲೋಬ್ಬ ಭಗ್ನ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಲು ಅಂತಾ ತಾನು ಓದುತ್ತಿರೋ ಸ್ಕೂಲಿಗೇ ಬೆಂಕಿ ಹಚ್ಚಿದ್ದಾನೆ ಎನ್ನಲಾಗ್ತಿದೆ. ಅಥಣಿ ತಾಲೂಕಿನ ತಾಂವಶಿ ಗ್ರಾಮದ ಯುವಕ ಉಮೇಶ್ ಅದೇ ಗ್ರಾಮದ ವೀಣಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಯುವತಿ ಮನೆಯವರಿಗೆ ತಿಳಿದು ಆಕೆಯನ್ನು ಶಾಲೆ ಬಿಡಿಸಿದ್ದರು. ಇದರಿಂದ ನೊಂದ ಪ್ರೇಮಿ ಉಮೇಶ್, ನನ್ನ ಪ್ರೀತಿಯನ್ನು ದೂರ ಮಾಡಲು ಶಾಲೆಯೇ ಕಾರಣ ಎಂದು ಭಾವಿಸಿ ಶಾಲೆಗೆ ಬೆಂಕಿ ಹಚ್ಚಿದ್ದಾನೆ. ಇನ್ನು ಬೆಂಕಿ ಹಚ್ಚುವುದಕ್ಕೂ ಮುಂಚೆ ಶಾಲೆಯೊಳಗಿನ ಬೋರ್ಡ್​ ಮೇಲೆ “ವೀಣಾ ಹಾಗೂ ಉಮೇಶ್ ಪ್ರೇಮಿಗಳು” “ಪ್ರೀತಿಯನ್ನು ದೂರ ಮಾಡಿದ ಶಾಲೆ” “ಪ್ರೀತಿಯಿಂದ ಮೋಸಹೋದ ಭಗ್ನ ಪ್ರೇಮಿ ಉಮೇಶ್” ಇನ್ನು ತನ್ನ ಪ್ರೇಮ ನಿವೇದನೆಯನ್ನೂ ಕುಡಾ ಮಾಡಿರುವುದು ಕಂಡು ಬಂದಿದೆ. ಇನ್ನು ಬೆಂಕಿಗೆ ಶಾಲೆಯಲ್ಲಿಯ ನಾಲ್ಕು ಕೊಠಡಿ ಶಾಲೆಯ ಪೀಠೋಪಕರಣಗಳು, ಶಾಲಾ ದಾಖಲಾತಿ ಸಂಪೂರ್ಣ ಭಸ್ಮವಾಗಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv