ಸಾರ್ವಜನಿಕ ಶೌಚಾಲಯಕ್ಕಿಂತಲೂ ಎಟಿಎಂ ಮಷಿನ್ ಗಲೀಜಂತೆ…!

ಎಟಿಎಂ ಯಂತ್ರಗಳು ಕೆಲವು ವೇಳೆ ಮಿನಿ ಬ್ಯಾಂಕ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಬಹುತೇಕ ಬ್ಯಾಂಕ್​​ ವ್ಯವಹಾರಗಳನ್ನು ATMನಲ್ಲೇ ಮಾಡಬಹುದು. ಬ್ಯಾಂಕ್‌ಗೆ ಹೋಗುವ ಅಗತ್ಯವಿರುವುದಿಲ್ಲ. ಆದ್ರೆ ಎಟಿಎಂ ಬಳಕೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಅಂದ್ರೆ ಆಶ್ಚರ್ಯ ಆಗಬಹುದು. ಸಾಮಾನ್ಯವಾಗಿ ಹಲವು ಮಂದಿ ಎಟಿಎಂ ಕೇಂದ್ರಗಳಲ್ಲಿ ಹಣ ವಿತ್ ಡ್ರಾ, ಬ್ಯಾಲೆನ್ಸ್ ಪರಿಶೀಲನೆ, ಫಂಡ್ ಟ್ರಾನ್ಸ್‌ಫರ್, ಪಿನ್ ಚೇಂಜ್ ಹೀಗೆ ಹಲವು ಕಾರ್ಯಗಳಿಗೆ ಬಳಸುತ್ತಾರೆ. ಆದ್ರೆ ನಿಮ್ಗೆ ಗೊತ್ತಾ! ಎಟಿಎಂ ಯಂತ್ರದ ಕೀ ಬೋರ್ಡ್, ಪಬ್ಲಿಕ್ ಟಾಯ್ಲೆಟ್‌ಗಿಂತಲೂ ಹೆಚ್ಚು ಗಲೀಜಾಗಿರುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ವಾಸ್ತವವಾಗಿ ಎಟಿಎಂ (ಎನಿ ಟೈ ಮನಿ) ಕೀಬೋರ್ಡ್​ನಲ್ಲಿ​​ ಸೂಕ್ಷ್ಮ ಜೀವಿಗಳು ಜೀವಿಸುತ್ತಿರುತ್ತವೆ. ಎಟಿಎಂ ಕೀ ಬೋರ್ಡ್‌ನಲ್ಲಿ ಅಧಿಕ ಬ್ಯಾಕ್ಟೀರಿಯಾಗಳು ಇದ್ದು, ಇವು ಅನಾರೋಗ್ಯ ತಂದೊಡ್ಡಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಅಧ್ಯಯನ ಹೇಳೋದೇನು?
ಬ್ರಿಟಿಷ್ ಸಂಶೋಧಕರು ಈ ರಿಸರ್ಚ್ ನಡೆಸಿದ್ದು, ಎಟಿಎಂ ಕೀ ಬೋರ್ಡ್‌ ಹಾಗೂ ಸಾರ್ವಜನಿಕ ಶೌಚಾಲಯಗಳ ಸ್ವಾಬ್‌ ಪರೀಕ್ಷೆ ನಡೆಸಿದ್ದಾರೆ. ಆದ್ರೆ ಸಂಶೋಧಕರಲ್ಲೂ ಇದು ಆಶ್ಚರ್ಯ ಮೂಡಿಸಿದೆ. ಸಾರ್ವಜನಿಕ ಶೌಚಾಲಯಗಳಂತೆ, ಎಟಿಎಂ ಯಂತ್ರದ ಸ್ಥಳಗಳಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಕಂಡು ಬರುತ್ತವೆ. ಇದು ಮನುಷ್ಯರಲ್ಲಿ ಅನಾರೋಗ್ಯ ಉಂಟು ಮಾಡುತ್ತವೆ. ಇಲ್ಲಿರುವ ಸೂಕ್ಷ್ಮಾಣು ಜೀವಿಗಳು ಸ್ವೆಲಿಂಗ್‌ ಹಾಗೂ ಭೇದಿಗೆ ಕಾರಣವಾಗಬಲ್ಲದು ಎಂದು ತಿಳಿದು ಬಂದಿದೆ.

ಬ್ರಿಟಿಷ್ ಮೂಲದ ಬಯೋ ಕೋಟ್ ಸೂಕ್ಷ್ಮಜೀವ ವಿಜ್ಞಾನಿ ರಿಚರ್ಡ್ ಹೇಳುವ ಪ್ರಕಾರ, ಈ ಫಲಿತಾಂಶ ನಮ್ಮನ್ನು ಆಶ್ಚರ್ಯಗೊಳಿಸಿದೆ. ಏಕೆಂದರೆ, ಎಟಿಎಂ ಯಂತ್ರಗಳು ಸಾರ್ವಜನಿಕ ಟಾಯ್ಲೆಟ್‌ನಷ್ಟೇ ಬ್ಯಾಕ್ಟೇರಿಯಾಗಳಿಂದ ಹೆಚ್ಚು ಕಲುಷಿತಗೊಂಡಿರುತ್ತವೆ ಎಂದು ಪರೀಕ್ಷೆಯಿಂದ ಕಂಡು ಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿರುವ ಟೆಲಿಫೋನ್‌ಗಳು ಕೂಡಾ ಹೆಚ್ಚು ಸೂಕ್ಷ್ಮಾಣು ಜೀವಿಗಳಿಂದ ಕೂಡಿರುತ್ತವೆ. ಹೆಚ್ಚಿನ ಜನರು ಟೆಲಿಫೋನ್‌ಗಳನ್ನು ತಮ್ಮ ಮೂಗು ಹಾಗೂ ಬಾಯಿಯ ಹತ್ತಿರಕ್ಕೆ ಇಟ್ಟುಕೊಂಡು ಮಾತಾಡುತ್ತಾರೆ. ಹೀಗಾಗಿ ಬ್ಯಾಕ್ಟೀರಿಯಾಗಳು ಅಧಿಕ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಹೆಚ್ಚು ಎಂದು ರಿಚರ್ಡ್ ಅಭಿಪ್ರಾಯಪಟ್ಟಿದ್ದಾರೆ.

ಎಟಿಎಂ ಯಂತ್ರ ಉಪಯೋಗಿಸಿದ ಬಳಿಕ ನಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡರೆ ಯಾವುದೇ ತೊಂದರೆ ಇಲ್ಲ. ಪಬ್ಲಿಕ್‌ ಪ್ಲೇಸ್‌ನಲ್ಲಿ ನಮ್ಮ ಕೈಗಳನ್ನು ಇರಿಸಿಕೊಳ್ಳುವುದರ ಬಗ್ಗೆ ಎಚ್ಚರದಿಂದ ಇರಬೇಕು. ಎಲ್ಲಿಗೆ ಹೋದರೂ ಸೋಂಕು ನಿವಾರಕ ವೈಪ್ಸ್‌ ಅನ್ನು ತೆಗೆದುಕೊಂಡು ಹೋಗಬೇಕು ಎಂಬ ಸಂದೇಶ ನೀಡಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv