ಉತ್ತಮ ಜೀರ್ಣಕ್ರಿಯೆಗೆ ನಿಮ್ಮ ಮನೆಯಲ್ಲೇ ಇದೆ ಸಿಂಪಲ್​ ಪರಿಹಾರ

ಜೀರ್ಣಕ್ರಿಯೆ ಸರಿಯಾಗಿ ಆಗ್ತಿಲ್ಲ ಅಂದರೆ ನಾವು ಸೇವಿಸುವ ಆಹಾರದಲ್ಲಿ ಏನೋ ಸಮಸ್ಯೆಯಿದೆ ಎಂದರ್ಥ. ಜೀರ್ಣಕ್ರಿಯೆ ಸರಿಯಾಗಿ ಆಗಿಲ್ಲ ಅಂದರೆ, ಹೊಟ್ಟೆನೋವು ಹಾಗೂ ಗ್ಯಾಸ್​ ಸಮಸ್ಯೆ ಉಂಟಾಗುತ್ತದೆ. ಕ್ರಮೇಣ ಇದು ಮಲ್ಲಬದ್ಧತೆಗೂ ಕಾರಣವಾಗಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ವಿವಿಧ ರೀತಿಯ ಆಹಾರಗಳು ನಮ್ಮ ಮನೆಯಲ್ಲೇ ಇದೆ. ಸೋಂಪು, ಎಳ್ಳಿನ ಬೀಜಗಳು, ಕತ್ತರಿಸಿದ ಬಾದಾಮಿ, ಅಗಸೆ, ಮತ್ತು ಅಜ್ವೈನ್ ಇವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

1. ಸೋಂಪು: ಊಟದ ನಂತರ ಸೋಂಪನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಅನೇಕ ರೆಸ್ಟೋರೆಂಟ್​ಗಳಲ್ಲಿ ಊಟದ ನಂತರ ತಿನ್ನಲು ಸೋಂಪನ್ನ ನೀಡುತ್ತಾರೆ. ಯಾಕಂದ್ರೆ ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ ಅಂತ ಜನಪ್ರಿಯವಾಗಿದೆ. ಅಲ್ಲದೇ ಗ್ಯಾಸ್​ನಿಂದ ಉಂಟಾಗುವ ನೋವು ನಿವಾರಿಸುವುದು, ಜೀರ್ಣಕ್ರಿಯೆಯನ್ನ ಉತ್ತೇಜಿಸುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

2. ಎಳ್ಳು: ಎಳ್ಳಿನ ಬೀಜಗಳಲ್ಲಿರುವ ಡಯೆಟರಿ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಅಗತ್ಯವಿರುವ ಫೈಬರ್​ ಅನ್ನ ನಿಮ್ಮ ದೇಹಕ್ಕೆ ಒದಗಿಸುತ್ತವೆ. ಗಟ್​ ಬ್ಯಾಕ್ಟೀರಿಯಾವನ್ನು ಸುಧಾರಿಸಲು ಫೈಬರ್ ಸಹಾಯ ಮಾಡುತ್ತದೆ. 100 ಗ್ರಾಂ ಎಳ್ಳಿನಲ್ಲಿ ಸುಮಾರು 12 ಗ್ರಾಂ ಫೈಬರ್​ ಇರುತ್ತದೆ. ಇದು ನಿಮ್ಮ ಆಹಾರಗಳೊಂದಿಗೆ ಸೇರಿದಾಗ ದೇಹದಲ್ಲಿ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತಮಗೊಳ್ಳುತ್ತದೆ.

3.ಅಗಸೆ ಬೀಜಗಳು: ಪ್ರೋಟೀನ್, ಕಾರ್ಬ್ಸ್, ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು, ಬಿ-ವಿಟಮಿನ್​ಗಳು ಮತ್ತು ಹೆಚ್ಚು ರೀತಿಯ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಅಗಸೆ ಬೀಜಗಳನ್ನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

4.ಬಾದಾಮಿ: ಬಾದಾಮಿಯಲ್ಲಿ ಕೂಡ ಫೈಬರ್​ ಅಂಶ ಸಮೃದ್ಧವಾಗಿದೆ. ಸರಿಯಾದ ಪ್ರಮಾಣದಲ್ಲಿ ಬಾದಾಮಿಯನ್ನ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಬಾದಾಮಿಗಳನ್ನ ಹೆಚ್ಚಾಗಿ ಸೇವಿಸುವುದರಿಂದ ಗಟ್​ ಬ್ಯಾಕ್ಟೀರಿಯಾ ಅನುಕೂಲವನ್ನ ಒದಗಿಸುತ್ತವೆ. ಇನ್ನು ಇದರಲ್ಲಿರುವ ವಿಟಮಿನ್- E ಹೃದಯದ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.

5. ಅಜ್ವೈನ್: ಅಜ್ವೈನ್​ ಅಥವಾ ಓಂ ಕಾಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್​ ಉಂಟಾಗದಂತೆ ತಡೆಯಬಹುದು. ಇದರಲ್ಲಿ ಥೈಮಾಲ್​ ಎಂಬ ಅಂಶವು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಗ್ಯಾಸ್ಟ್ರಿಕ್ ರಸವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅಜೀರ್ಣ ಸಮಸ್ಯೆಗೆ ಹಲವು ವರ್ಷಗಳಿಂದ ಅಜ್ವೈನ್​ನನ್ನ ಬಳಸಲಾಗುತ್ತಿದೆ.