ಫೇಶಿಯಲ್​ ರೆಕಗ್ನಿಷನ್ ಸ್ಕ್ರೀನ್​ ಲಾಕ್ ಬಳಸಿ ಸ್ನೇಹಿತನ ಅಕೌಂಟ್​ಗೆ ಕನ್ನ.!

ಬೀಜಿಂಗ್: ತಂತ್ರಜ್ಞಾನ ಎಷ್ಟೇ ಮುಂದುವರಿದ್ರೂ ಕೂಡ ಕೆಲವರಿಗೆ ಅದ್ಯಾವುದು ಲೆಕ್ಕಕ್ಕೇ ಬರಲ್ಲ. ಟೆಕ್ನಾಲಜಿ ಚಾಪೆ ಕೆಳಗೆ ತೂರಿದ್ರೆ ಕಳ್ಳರು ರಂಗೋಲಿ ಕೆಳಗೆ ತೂರಿದ್ದಕ್ಕೆ ಇಲ್ಲೊಂದು ಬೆಸ್ಟ್​ ಎಕ್ಸಾಂಪಲ್ ಇದೆ. ಮೊಬೈಲ್​ಗಳಿಗೆ ಫೇಶಿಯಲ್​ ರೆಕಗ್ನಿಷನ್​ ಮೂಲಕ ಸ್ಕ್ರೀನ್ ಲಾಕ್​ ಓಪನ್ ಮಾಡುವ ಫೀಚರ್ ಟ್ರೆಂಡಿಂಗ್​ನಲ್ಲಿದೆ. ಆದ್ರೆ ಇದ್ರಲ್ಲೂ ಚಾಲಾಕಿತನ ಮೆರೆದ ಇಬ್ಬರು, ಕಳ್ಳತನ ಮಾಡೋದ್ರಲ್ಲೂ ತಾವು ಹೈಟೆಕ್ ಅಂತ ಪ್ರೂವ್​​ ಮಾಡಿದ್ದಾರೆ.

ಚೀನಾದ ನಿಂಗ್​ಬೋನ ಹೋಟೆಲ್​ನಲ್ಲಿ ಸಪ್ಲೈಯರ್​ ಕೆಲಸ ಮಾಡುತ್ತಿರುವ ಮೂವರು ಯುವಕರು ಒಂದೇ ರೂಮ್​ನಲ್ಲಿ ವಾಸವಿದ್ದರು. ಈ ಪೈಕಿ ಒಬ್ಬ ರೂಮ್​ ಮೇಟ್​ ತನ್ನ ಮೊಬೈಲ್​ ಪಕ್ಕದಲೇ ಇಟ್ಟು ನಿದ್ರಿಸಿದ್ದಾನೆ. ಇದೇ ಸಮಯಕ್ಕೆ ಕಾಯ್ತಿದ್ದ ಇನ್ನಿಬ್ಬರು ರೂಮ್​ಮೇಟ್​ಗಳು ಆತನ ಮಖದ ಹತ್ತಿರ ಮೊಬೈಲ್ ಇಟ್ಟು ಸ್ಕ್ರೀನ್ ಅನ್​ಲಾಕ್​ ಮಾಡುತ್ತಾರೆ. ಬಳಿಕ ಆತನ ವಿ ಚಾಟ್​ ಅಕೌಂಟ್​ನಿಂದ ತಮ್ಮ ಅಕೌಂಟ್​ಗೆ 10 ಸಾವಿರ ಯಾನ್​​ (ಸುಮಾರು 1 ಲಕ್ಷ ರೂಪಾಯಿ) ಟ್ರಾನ್ಸ್​ಫರ್ ಮಾಡಿಕೊಳ್ಳುತ್ತಾರೆ. ಬೆಳಗ್ಗೆ ತನ್ನ ಅಕೌಂಟ್​ನಲ್ಲಿ ಹಣ ಇಲ್ಲದಿರುವುದು ತಿಳಿದು ಆ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರು, ಕಡೆಗೂ ಪಕ್ಕದಲ್ಲೇ ಇದ್ದ ಕಳ್ಳರನ್ನ ಬಂಧಿಸಿದ್ದಾರೆ. ಸಾಮಾನ್ಯವಾಗಿ ಕಣ್ಣುಗಳು ಮುಚ್ಚಿದ್ದಾಗ ಸ್ಕ್ರೀನ್ ಲಾಕ್ ಓಪನ್ ಆಗುವುದಿಲ್ಲ. ಆದ್ರೆ ಈ ಪ್ರಕರಣದಲ್ಲಿ ಆತ ಕಣ್ಣು ಮಚ್ಚಿದ್ದರು ಸಹ ಸ್ಕ್ರೀನ್ ಲಾಕ್ ಓಪನ್ ಆಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv