ಕಣ್​ ಬಿಟ್ಟಳಾ ಕಾಳಿ ದೇವಿ..?! ವಿಡಿಯೋ ವೈರಲ್​

ಹಾಸನ: ನವರಾತ್ರಿ ಉತ್ಸವದ ವೇಳೆಯಲ್ಲಿ ಹಾಸನದಲ್ಲಿ ಕಾಳಿ ದೇವಿಯ ವಿಗ್ರಹ ಕಣ್ಣು ತೆರೆದು ನೋಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ, ಜತೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದ ಭದ್ರ ಕಾಳಮ್ಮ ದೇವಾಲಯದಲ್ಲಿ ಕಾಳಿ ದೇವಿ ಕಣ್ಣು ಬಿಟ್ಟಿದ್ದಾಳೆ.

ಇನ್ನು, ದೇವಿ ಕಣ್ಣು ತೆರೆದಿರುವುದನ್ನು ನೋಡಲು ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಇನ್ನು, ದೇವಿ ಕಣ್ಣು ತೆರೆದು ನೋಡಿದ್ದು, ಇಲ್ಲಿನ ಸ್ಥಳೀಯರನ್ನು ಆತಂಕ ಮೂಡಿಸಿದೆ. ದೇವಿ ಕಣ್ಣು ತೆರೆದು ನೋಡಿದ್ದು, ಮುಂದೆ ಯಾವುದಾದರೂ ಅನಾಹುತ ಸೂಚನೆಗೆ ದೇವಿ ಕಣ್ಣು ತೆರೆದು ಇದ್ದಾಳಾ ಎಂಬ ಆತಂಕ ಮೂಡಿದೆ. ದೇವಿ ಕಣ್ಣು ತೆರೆದಿರುವ ದೃಶ್ಯವನ್ನು ಭಕ್ತರು ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಈಗ ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv