ಕೊಲಂಬೋ ಚರ್ಚ್​​ ಬಳಿ ಮತ್ತೊಂದು ವಿಸ್ಫೋಟ, ಬೆಚ್ಚಿದ ದ್ವೀಪ ರಾಷ್ಟ್ರ

ಕೊಲಂಬೊ: ಸರಣಿ ಬಾಂಬ್​ ಸ್ಫೋಟಗಳಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್​ ಸ್ಫೋಟ ಆಗಿದೆ. ರಾಜಧಾನಿಯ ಚರ್ಚ್ ಬಳಿಯಿದ್ದ ವ್ಯಾನ್​​​ನಲ್ಲಿ ಬಾಂಬ್​ ಸ್ಫೋಟಗೊಂಡಿದೆ. ಆದ್ರೆ ಬಾಂಬ್​​ ನಿಷ್ಕ್ರಿಯ ದಳದ ಅಧಿಕಾರಿಗಳು ಬಾಂಬ್​​ಗಳನ್ನು ನಿಷ್ಕ್ರಿಯಗೊಳಿಸುವಾಗ ಒಂದು ಬಾಂಬ್​ ಸ್ಫೋಟಗೊಂಡಿದೆ.

ನಿನ್ನೆ ಈಸ್ಟರ್​​ ಹಬ್ಬದ ವೇಳೆ ಚರ್ಚ್​​ಗಳ ಬಳಿಯೇ ಭಾರೀ ಪ್ರಮಾಣದಲ್ಲಿ ಬಾಂಬ್​ ಸ್ಫೋಟಗಳು ನಡೆದಿದ್ದವು. ಇದೀಗ ಚರ್ಚ್ ಬಳಿ ಬಾಂಬ್​​ ಪತ್ತೆಯಾಗಿರುವುದು ದ್ವೀಪ ರಾಷ್ಟ್ರವನ್ನು ಮತ್ತೆ ಆತಂಕಕ್ಕೆ ದೂಡಿದೆ.