ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಡಯೆಟ್​ ಹೇಗಿರಬೇಕು..? ಇಲ್ಲಿದೆ ಸಿಂಪಲ್​ ಟಿಪ್ಸ್​

ಡೇ ಶಿಫ್ಟ್​ನಲ್ಲಿ ಕೆಲಸ ಮಾಡುವವರದ್ದು, ಒಂದು ರೀತಿಯ ಜೀವನ ಶೈಲಿಯಾದ್ರೆ, ನೈಟ್ ಶಿಫ್ಟ್​​ನಲ್ಲಿ ಕೆಲಸ ಮಾಡುವವರದ್ದು ಮತ್ತೊಂದು ರೀತಿಯ ಜೀವನ ಶೈಲಿ.. ರಾತ್ರಿ ಎಲ್ಲಾರು ಹಾಯಾಗಿ ಮಲಗಿದ್ರೆ ನೈಟ್​ಶಿಫ್ಟ್​ನವರು ಮಾತ್ರ ಆಫೀಸ್​ನಲ್ಲಿ ಕೆಲಸ ಮಾಡ್ತಾ ಇರ್ತಾರೆ. ಆದರೆ ಸಾಮಾನ್ಯವಾಗಿ ನೈಟ್​ ಶಿಫ್ಟ್​ನಲ್ಲಿ ಕೆಲಸ ಮಾಡುವವರು ವ್ಯಾಯಾಮದ ಕಡೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ಜೊತೆಗೆ ಟೈಮ್​ಗೆ ಸರಿಯಾಗಿ ಊಟ ಮಾಡುವುದಿಲ್ಲ. ಆರೋಗ್ಯದ ಕಡೆಯೂ ಹೆಚ್ಚು ಗಮನ ಹರಿಸಲ್ಲ. ಇನ್ನು ನೈಟ್​ ಶಿಫ್ಟ್​ನಲ್ಲಿ ಕೆಲಸ ಮಾಡುವವರಲ್ಲಿ ಮೂತ್ರಕೋಶದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇನ್ನು ಗರ್ಭಿಣಿಯರಲ್ಲಿ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಶುಗರ್​, ಒಬೆಸಿಟಿಯಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಆದ್ದರಿಂದ, ನೀವು ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಮುಖ್ಯ.

ನೈಟ್​ ಶಿಫ್ಟ್ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರಲ್ಲಿ ಸಿರ್ಕಾಡಿಯನ್ ರಿದಮ್​ ನಿಮ್ಮ ದೇಹಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಸಿರ್ಕಾಡಿಯನ್ ರಿದಮ್ ಅಂದ್ರೆ ನಮ್ಮ ದೇಹದ ನೈಸರ್ಗಿಕ ಗಡಿಯಾರ. ಇದು ನಾವು ಯಾವಾಗ ಮಲಗಬೇಕು, ಯಾವಾಗ ಎದ್ದೇಳಬೇಕು ಎಂಬುದನ್ನ ಸೂಚಿಸುತ್ತಿರುತ್ತದೆ. ಕೆಲವೊಮ್ಮೆ ನಿದ್ರಾಹೀನತೆ ನಿಮ್ಮನ್ನ ಬಾದಿಸುತ್ತಿದ್ರೆ, ಸಿರ್ಕಾಡಿಯನ್ ರಿದಮ್ ನಿಮ್ಮನ್ನ ಎಚ್ಚರಿಸುತ್ತದೆ. ಸೂಕ್ತ ರೀತಿಯಲ್ಲಿ ಡಯೆಟ್​ ಮಾಡದೇ ಇರುವುದು, ವ್ಯಾಯಾಮಗಳ ಕೊರತೆಯಿಂದ ಅನೇಕ ಆರೋಗ್ಯದ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಆರೋಗ್ಯವನ್ನ ಕಾಪಾಡಿಕೊಳ್ಳುವುದು ಹೇಗೆ ?

1. ಕೆಫೇನ್​ಗಳ ಸೇವನೆಯನ್ನು ಕಡಿಮೆ ಮಾಡಿ: ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಕಾಫಿ ಸೇವನೆ ಮಾಡುತ್ತಾರೆ. ನಿದ್ರೆ ಬಾರದೇ ಕೆಲಸ ಮಾಡಲು ಕೆಲವೊಮ್ಮೆ ಕಾಫಿ ಅವಶ್ಯ ಎನಿಸಬಹುದು. ಆದರೆ ಆದಷ್ಟು ಕಾಫಿ ಸೇವನೆ ಕಡಿಮೆ ಮಾಡುವುದು ಒಳಿತು. ಯಾಕಂದ್ರೆ ಕಾಫಿ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ಸ್ಥೂಲಕಾಯತೆ, ಟೈಪ್ 2 ಡಯಾಬಿಟೀಸ್​, ಅಧಿಕ ರಕ್ತದೊತ್ತಡ, ಒತ್ತಡ, ಆಟೋಇಮ್ಯೂನ್ ಕಾಯಿಲೆಗಳನ್ನು ತಂದೊಡ್ಡಬಹುದು.

2. ಡಯೆಟ್​: ನೈಟ್​ ಶಿಫ್ಟ್​ ಆರಂಭವಾಗುವುದಕ್ಕೆ ಸ್ವಲ್ಪ ಸಮಯವಿದೆ ಎಂದಾಗಲೇ ಸ್ವಲ್ಪ ಪ್ರಮಾಣದಲ್ಲಿ ಊಟ ಮಾಡಿ. ಹೀಗೆ ಮಾಡೋದ್ರಿಂದ ಡೈಜೇಶನ್​ ಸಮಸ್ಯೆ, ಎದೆಉರಿ, ಮಲಬದ್ದತೆ, ಗ್ಯಾಟ್ಟ್ರಿಕ್​ ಸಮಸ್ಯೆ ಬರುವುದಿಲ್ಲ. ಫ್ರೂಟ್ಸ್​, ಡ್ರೈ ಫ್ರೂಟ್ಸ್​, ಮೊಸರನ್ನ ರಾತ್ರಿ ವೇಳೆ ಸೇವಿಸಿ. ಹೆಚ್ಚು ಉಪ್ಪು ಮತ್ತು ಸಕ್ಕರೆ ಇರುವ ಆಹಾರಗಳಿಂದ ದೂರವಿರಿ.

3. ಹೆಚ್ಚಾಗಿ ನೀರು ಸೇವಿಸಿ : ಹೆಚ್ಚು ನೀರು ಸೇವಿಸುವುದರ ಮೂಲಕ ನಿಮ್ಮ ದೇಹ ಡಿ-ಹೈಡ್ರೇಟ್​ ಆಗದಂತೆ ನೋಡಿಕೊಳ್ಳಿ. ಒಂದು ವೇಳೆ ಬರಿ ನೀರು ಕುಡಿಯಲು ಬೇಸರ ಎನಿಸಿದ್ರೆ, ಹರ್ಬಲ್​ ಟೀ, ಕಡಿಮೆ ಸಕ್ಕರೆಯಿಂದ ಕೂಡಿದ ನಿಂಬೆಹಣ್ಣಿನ ಜ್ಯೂಸ್​ಗಳನ್ನ ಆಗಾಗ ಕುಡಿಯುತ್ತಿರಿ. ಅತಿಯಾದ ಉಪ್ಪಿನಂಶವಿರುವ ಆಹಾರಗಳು ಮತ್ತು ಸಕ್ಕರೆ ಇರುವ ಆಹಾರಗಳನ್ನ ಸೇವಿಸಬೇಡಿ.

4. ಹಸಿವಿನಿಂದ ಇರಬೇಡಿ, ಸಾಧ್ಯವಾದಷ್ಟು ಆರೋಗ್ಯಕರ ಆಹಾರಗಳನ್ನ ಸೇವಿಸುತ್ತಿರಿ. ಮತ್ತು ಮಲಗುವ ಮುನ್ನವು ಲಘು ಆಹಾರವನ್ನ ಸೇವಿಸಿ. ನಿಮ್ಮ ಸಮಯದಲ್ಲಿ ಒಂದಷ್ಟು ಸಮಯವನ್ನ ವ್ಯಾಯಾಮಕ್ಕೆ ಮೀಸಲಿಡಿ. ಜಾಗಿಂಗ್​, ಯೋಗ, ಜಿಮ್​ನಲ್ಲಿ ಆದಷ್ಟು ವ್ಯಾಯಾಮಗಳನ್ನ  ಮಾಡಿ. ಇದು ನೀವು ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv