7800 ಲೀಟರ್ ಬೀಯರ್ , 163 ಲೀಟರ್​ ಅಕ್ರಮ ಮದ್ಯ ಸೀಜ್..

ರಾಯಚೂರು: ನಾಳೆ ರಾಯಚೂರು ಲೋಕಸಭೆ ಚುನಾವಣೆ ನಡೆಯಲಿದೆ. ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದ್ಗಲ್​ ಗ್ರಾಮದಲ್ಲಿನ ಶಿವರಾಜ್ ಎಂಬುವವರ ಹೋಟೆಲ್​ನಲ್ಲಿ ಸಂಗ್ರಹಿಸಿಟ್ಟಿದ್ದ 7,800 ಲೀಟರ್ ಬೀಯರ್, 163 ಲೀಟರ್​ ಅಕ್ರಮ ಮದ್ಯ ಸೀಜ್ ಮಾಡಿದ್ದಾರೆ. ಸೀಜ್​ ಮಾಡಿರುವ ಮದ್ಯದ ಬೆಲೆ ಸುಮಾರು 99 ಸಾವಿರ 351 ರೂಪಾಯಿ ಅಂತಾ ಪೊಲೀಸರು ಅಂದಾಜಿಸಿದ್ದಾರೆ. ಇನ್ನು ಆರೋಪಿ ಶಿವರಾಜ್ ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv