ತೆರಿಗೆ ಅಧಿಕಾರಿ ಡಾ. ಸಿದ್ದರಾಮಯ್ಯ ಬಿಜೆಪಿ‌ಗೆ ಸೇರ್ಪಡೆ!

ಬೆಂಗಳೂರು: ಮಾಜಿ ಶಾಸಕ ದೊಡ್ಡ ಬೋರೇಗೌಡರ ಪುತ್ರ ಡಾ. ಸಿದ್ದರಾಮಯ್ಯ ಬಿಜೆಪಿ‌ಗೆ ಸೇರ್ಪಡೆಯಾದರು. ಮಂಡ್ಯ ಮತ್ತು ಶ್ರೀರಂಗಪಟ್ಟಣದಿಂದ ದೊಡ್ಡಬೋರೇಗೌಡ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ಸದ್ಯ ಬಿಜೆಪಿ ಸೇರಿರುವ ಅವರ ಪುತ್ರ ಡಾ.ಸಿದ್ದರಾಮಯ್ಯ ಮಂಡ್ಯ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.

ಡಾ.ಸಿದ್ದರಾಮಯ್ಯ ನಿವೃತ್ತ ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿ ಸರ್ಕಾರಿ‌ ಸೇವೆಯಲ್ಲಿದ್ದರು. ಇಲ್ಲಿಯ ವರೆಗೂ ರಾಜಕಾರಣದತ್ತ ಮುಖ ಮಾಡದ ಅವರು ಈಗ ತಂದೆಯ ಹಾದಿಯಲ್ಲೇ ರಾಜಕೀಯಕ್ಕೆ ಧುಮುಕಿದ್ದಾರೆ.

ತಂದೆ ದೊಡ್ಡಬೋರೇಗೌಡರು ಕಾಂಗ್ರೆಸ್, ಜನತಾ ಪಕ್ಷದಿಂದ ರಾಜಕೀಯ ಮಾಡಿದ್ದರು. ಆದ್ರೆ ಪುತ್ರ ಸಿದ್ದರಾಮಯ್ಯ ಕಮಲ ಹಿಡಿದು ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಸಿದ್ದರಾಮಯ್ಯ ಮಾಜಿ ಡಿಸಿಎಂ ಆರ್.ಅಶೋಕ್, ಸಿ.ಪಿ ಯೋಗೀಶ್ವರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಈಗಾಗಲೇ ಸಿದ್ದರಾಮಯ್ಯ ಅವರೇ ಮಂಡ್ಯದ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv