ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಾಜಿ ಪ್ರಧಾನಿ ವಾಜಪೇಯಿ

ದೆಹಲಿ: ತೀವ್ರ ಅನಾರೋಗ್ಯ ಹಿನ್ನೆಲೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ.

ಕಿಡ್ನಿ ವೈಫಲ್ಯ, ಉಸಿರಾಟ ಸಮಸ್ಯೆ ಹಾಗೂ ಮೂತ್ರನಾಳ ತೊಂದರೆಯಿಂದ ಬಳಲುತ್ತಿರುವ 93ವರ್ಷದ ವಾಜಪೇಯಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವಾಜಪೇಯಿ ಅವರ ಸ್ಥಿತಿ ಸುಧಾರಿಸಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಏಮ್ಸ್ ವೈದ್ಯರು ದೃಢಪಡಿಸಿದ್ದಾರೆ.  ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೆಗೌಡ, ಡಾ.ಮನಮೋಹನ ಸಿಂಗ್ ಹಾಗೂ ಇನ್ನಿತರ ನಾಯಕರು ವಾಜಪೇಯಿಯವರನ್ನ ನೋಡಲು ಆಸ್ಪತ್ರೆಗೆ ಭೇಟಿ ನೀಡಿದರು. ದೇಶಾದ್ಯಂತ ವಾಜಪೇಯಿಯವರ ಅಭಿಮಾನಿಗಳು ಅಜಾತಶತ್ರುವಿನ ಆರೋಗ್ಯ ಸುಧಾರಿಸಲೆಂದು ಹೋಮ ಹವನಗಳನ್ನು ನಡೆಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv