‘ಮಹದಾಯಿ ಕಳಸಾ ಬಂಡೂರಿಗೆ ಬಿಜೆಪಿಗರು ಏನು ಮಾಡಿದ್ರೀ?’

ಬಾಗಲಕೋಟೆ: ಮಹದಾಯಿ ಕಳಸಾ ಬಂಡೂರಿಗೆ ಬಿಜೆಪಿಗರು ಏನು ಮಾಡಿದ್ರಿ. 16-17 ಸಂಸದರನ್ನ ರಾಜ್ಯ ಕೊಟ್ಟಿದ್ರೂ ನೀವು ಏನೂ ಮಾಡಲಿಲ್ಲ ಅಂತಾ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ನೇರವಾಗಿ ಬಿಜೆಪಿಗೆ ಟಾಂಗ್ ನೀಡಿದ್ರು. ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ₹34 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ನಿಮ್ಮಿಂದ ಏನು ಸಾಧ್ಯವಾಗಿದೆ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ರು. ಅಲ್ಲದೇ ಬಿಜೆಪಿ ರೈತರನ್ನ ಎತ್ತಿ ಕಟ್ಟುವ ಕೆಲಸಮಾಡ್ತಿದೆ ಅಂತಾ ನೇರವಾಗಿ ಆರೋಪಿಸಿದ್ರು. ಇನ್ನು ಕೇಂದ್ರದಿಂದ ಕರಾವಳಿಗೆ ಎಷ್ಟು ದುಡ್ಡು ಬಂದಿದೆ ಅಂದ್ರೆ ಬಿಜೆಪಿಗರು ಆ ಬಗ್ಗೆ ಏನೂ ಮಾತನಾಡಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಕಾ ಅಂತಾ ವಿಶ್ವಾಸ ವ್ಯಕ್ತಪಡಿಸಿದ ಕೋನರೆಡ್ಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಂತರೂ ಗೆಲ್ಲಿಸುತ್ತೇವೆ, ಜೆಡಿಎಸ್ ಅಭ್ಯರ್ಥಿ ನಿಂತರೂ ಗೆಲ್ಲಿಸುತ್ತೇವೆ ಎಂದರು. ಇನ್ನು ಬಾಗಲಕೋಟೆಯಲ್ಲಿ ಜೆಡಿಎಸ್​ನಿಂದ ಎಂಪಿ ಅಭ್ಯರ್ಥಿ ಇಲ್ಲಾ ಎನ್ನುತ್ತಾರೆ ಎಸ್.ಕೆ. ಬೆಳ್ಳುಬ್ಬಿ ಅವ್ರನ್ನೇ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದರು.
ನಾವು ಬಿಜೆಪಿಯ ಮಾತು ಕೇಳಿ ಸಾಲಮನ್ನಾ ಮಾಡಿಲ್ಲ, ರೈತರ ಮಾತು ಕೇಳಿ ಸಾಲಮನ್ನಾ ಮಾಡಿದ್ದೇವೆ ಎಂದರು. ಇನ್ನು ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುವ ಬಿಜೆಪಿಗರ ಆರೋಪಕ್ಕೆ ಟಾಂಗ್ ನೀಡಿದ ಕೋನರೆಡ್ಡಿ, ಬಾಗಲಕೋಟೆ ಇಷ್ಟೊಂದು ಅಭಿವೃದ್ಧಿ ಆಗಿದ್ರೆ ಅದಕ್ಕೆ ಕಾರಣ ಮಾಜಿ ಪ್ರಧಾನಿ ಹೆಚ್​.ಡಿ.ದೇವೆಗೌಡ್ರು ಹಾಗೂ ಜಾಮದಾರ್ ಅವರು. ಅವರ ಕೊಡುಗೆ ಈ ಕ್ಷೇತ್ರಕ್ಕೆ ದೊಡ್ಡದು ಎಂದರು. ಕೇಂದ್ರ ಸರ್ಕಾರ ರೈತರ ನೆರವಿಗೆ ಬರದೆ ಇದ್ದಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv