ಮೈತ್ರಿ ಸರ್ಕಾರ ನಿಜವಾದ ಮೈತ್ರಿಯಿಂದ ಇರಬೇಕು: ಮಾಜಿ ಶಾಸಕ ಎ.ಕೆ. ಸುಬ್ಬಯ್ಯ

ಕೊಡಗು: ರಾಜ್ಯದಲ್ಲಿ ಜಾತ್ಯಾತೀತ ಶಕ್ತಿಗಳಿಗೆ ಬಹುಮತ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿರೋದು ಸರಿಯಾಗಿದೆ. ಮೈತ್ರಿ ಸರ್ಕಾರ ನಿಜವಾದ ಮೈತ್ರಿಯಿಂದ ಇರಬೇಕು. ಸೌಹಾರ್ದಯುತವಾಗಿ 5 ವರ್ಷ ಪೂರೈಸಬೇಕು ಎಂದು ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು, ಎರಡು ಪಕ್ಷಗಳು ಜನಾದೇಶಕ್ಕೆ ಮನ್ನಣೆ ನೀಡಿವೆ. ಜಾತ್ಯಾತೀತತೆ ಉಳಿವಿನ ಬಗ್ಗೆ ಮನೋಭಾವನೆ ಇರುವವರಿಗೆ ಖುಷಿಯಾಗಿದೆ. ಸುಭದ್ರ ಸರ್ಕಾರ ಇದೆ ಅಂತಾ ಜನ ನಂಬಿದ್ದಾರೆ. ಆಡಳಿತ ನಡೆಸುವವರೇ ಅಭದ್ರಗೊಳಿಸಿದರೆ ಅವರು ಜನದ್ರೋಹಿಗಳಾಗ್ತಾರೆ ಎಂದು ಎ.ಕೆ. ಸುಬ್ಬಯ್ಯ ಎಚ್ಚರಿಕೆಯನ್ನು ನೀಡಿದ್ರು.
ಇನ್ನೂ ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೇಳಿಕೆ ಬಹಿರಂಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಂಥದ್ದನ್ನು ಸೃಷ್ಟಿ ಮಾಡೋದಕ್ಕೆ ಅಂತಾನೇ ಕೆಲವರು ಇದ್ದಾರೆ. ಇಲ್ಲದ ಸಮಸ್ಯೆಗಳನ್ನು ಇಟ್ಟುಕೊಂಡು ಮಾಧ್ಯಮಗಳು ಚರ್ಚೆ ನಡೆಸುತ್ತಿವೆ. ಮಾಧ್ಯಮಗಳ ಚರ್ಚೆಗೆ ಜನ ಮನ್ನಣೆ ಕೊಡಬೇಕಿಲ್ಲ. ಭಿನ್ನಾಭಿಪ್ರಾಯ ಬರೋದು ಸಹಜ. ಹಾಗಂತ ಅದರಿಂದ ಸರ್ಕಾರ ನಡೆಸೋದು ಕಷ್ಟ ಅಂತ ಬಿಂಬಿಸೋದು ತಪ್ಪು ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv