ಒಡನಾಡಿ ರವೀಂದ್ರರ ಅಂತಿಮ ದರ್ಶನ ಪಡೆದ ಎಸ್​.ಎಸ್.ಮಲ್ಲಿಕಾರ್ಜುನ್​

ದಾವಣಗೆರೆ: ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಪಾರ್ಥೀವ ಶರೀರವನ್ನು ನಗರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ನಗರದ ಪಿ ಬಿ ರಸ್ತೆಯಲ್ಲಿರುವ ಶ್ರೀಶೈಲ ಮಠದ ಮುಂಭಾಗ ರವೀಂದ್ರ ಅವರ ಪಾರ್ಥೀವ ಶರೀರವನ್ನು 30 ನಿಮಿಷಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ, ಕಾಂಗ್ರೆಸ್​ ಮುಖಂಡ​ ಶಾಮನೂರು ಶಿವಶಂಕರಪ್ಪ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರವೀಂದ್ರರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಅವರ ತಾಯಿಗೆ ಸಂತ್ವನ ಹೇಳಿದರು.

ಇದೇ ವೇಳೆ, ಎಂ.ಪಿ.ರವೀಂದ್ರ ಆತ್ಮೀಯ ಒಡನಾಡಿ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೂವಿನ ಹಾರ ಹಾಕಿ ಆತ್ಮೀಯ ಗೆಳೆಯನಿಗೆ ವಿದಾಯ ಹೇಳಿದರು. ಅಂತಿದ ದರ್ಶನದಲ್ಲಿ ಸಮಾಜದ ಮುಖಂಡರು ಹಾಗೂ ಅಭಿಮಾನಿಗಳು ಕೂಡಾ ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv