ಅಂದು ರಾಜರಿಗೆ ಋಷಿಗಳ ಸಲಹೆ,ಇಂದು ಶ್ರೀಗಳಿಂದ ಸಲಹೆ:ಸೊಗಡು ಶಿವಣ್ಣ

ತುಮಕೂರು: ರಾಜರ ಆಡಳಿತದಲ್ಲಿ ಋಷಿ ಮುನಿಗಳು ಸಲಹೆ ನೀಡೋದು ಭಾರತದ ಇತಿಹಾಸದಿಂದ ತಿಳಿಯುತ್ತದೆ. ಅದೇ ರೀತಿ ಪ್ರಧಾನಿಯವರಿಗೆ ಶ್ರೀಗಳು ಸಲಹೆ ನೀಡಿದ್ದಾರೆ ಅಂತಾ ಪೇಜಾವರ ಶ್ರೀಗಳ ಹೇಳಿಕೆಯನ್ನು ಮಾಜಿ‌ ಸಚಿವ ಸೊಗಡು‌ ಶಿವಣ್ಣ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶ, ಧರ್ಮದ ಬಗ್ಗೆ, ಅನಾದಿಕಾಲದಿಂದ ಇದ್ದ ನಂಬಿಕೆ ಉಳಿಸಿ ಬೆಳೆಸಿಕೊಂಡು ಬಂದ ಮಹಾನುಭಾವರು ಪೇಜಾವರ ಶ್ರೀಗಳು. ಪೂಜ್ಯರ ಬಗ್ಗೆ ಪ್ರಧಾನಿಯವರಿಗೆ ಹೆಚ್ಚಿನ ಗೌರವ ಇದೆ. ಪ್ರಣಾಳಿಕೆಯಲ್ಲಿ ಹೇಳಿದ ಕಾರ್ಯಕ್ರಮಗಳನ್ನು ಬೇಗನೇ ಜಾರಿ ಮಾಡುವಂತೆ ಮೋದಿ ಸರ್ಕಾರದ ಕುರಿತು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ ಅಷ್ಟೆ. ಅದರ ಹೊರತಾಗಿ ಅವರು ಮೋದಿ ಸರ್ಕಾರವನ್ನು ಟೀಕೆ ಮಾಡಿಲ್ಲ ಅಂತಾ ಹೇಳಿದ್ರು. ಅಲ್ಲದೇ, ಶ್ರೀಗಳಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯಿಲ್ಲ. ಸಂಸದೆ ಶೋಭಾ ಕರಂದ್ಲಾಜೆ, ಷರಿಷತ್ ವಿಪಕ್ಷನಾಯಕ ಕೆ.ಎಸ್.ಈಶ್ವರಪ್ಪಯಾರಾದರೂ ಕೇಂದ್ರದ ‌ಸಾಧನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಬಹುದಿತ್ತು ಅಂತಾ ಹೇಳಿದ್ರು.