ಮೋದಿಯಿಂದ ಬಿಜೆಪಿಗೆ ಸೊಕ್ಕು ಜಾಸ್ತಿಯಾಗಿದೆ: ಎಸ್​.ಕೆ. ಬೆಳ್ಳುಬ್ಬಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರಿಂದ ಬಿಜೆಪಿಗೆ ಸೊಕ್ಕು ಜಾಸ್ತಿಯಾಗಿದೆ. ಧರ್ಮದ ಹೆಸರಿನಲ್ಲಿ, ಬಾಬ್ರಿ ಮಸೀದಿಯ ಹೆಸರಿನಲ್ಲಿ ಬಿಜೆಪಿಯವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಅಂತಾ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳ್ಳುಬ್ಬಿ, ಬಿಜೆಪಿಯಿಂದ ಒಂದು ನಾಯಿ ನಿಲ್ಲಿಸಿದ್ರೂ ಗೆಲ್ತಾರೆ ಅನ್ನೋ ವಿಶ್ವಾಸ ಅವರದ್ದು. ಬಿಜೆಪಿ ಧರ್ಮದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಅಂತಾ ಕಿಡಿಕಾರಿದ್ರು. ಈಗಾಗ್ಲೇ ಸಾಕಷ್ಟು ಯುವಕರು ಸೆರೆಮನೆಗೆ ಹೋಗ್ತಿದ್ದಾರೆ ಅಂತಾನೂ ತಿಳಿಸಿದ್ರು. ಇನ್ನು ಅವರು ಬಿಜೆಪಿ ತೊರೆದ ಬಗ್ಗೆ ಮಾತನಾಡಿ, ನಾನು ಒಂಬತ್ತು ವರ್ಷ ವಿಜಯಪುರ ಜಿಲ್ಲಾಧ್ಯಕ್ಷನಾಗಿ ಬಿಜೆಪಿ ಪಕ್ಷ ಕಟ್ಟಿದ್ದೆ. ಆದ್ರೆ ಚುನಾವಣೆಯಲ್ಲಿ ನನಗೆ ಟಕೆಟ್ ಕೊಡದೆ ಕಡೆಗಣಿಸಿದ್ರು. ಹೀಗಾಗಿ ನಾನು ಬಿಜೆಪಿ ಪಕ್ಷ ಬಿಟ್ಟೆ ಅಂತಾ ಸ್ಪಷ್ಟನೆ ನೀಡಿದ್ರು.
ಬಿಜೆಪಿ ಹಾಗೂ ಮೋದಿ ಭರವಸೆಗಳೆಲ್ಲಾ ಬೋಗಸ್
ರೈತರ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಹಾಗೂ ಮೋದಿ ಭರವಸೆಗಳೆಲ್ಲ ಬೋಗಸ್. ಬಿಜೆಪಿಗರು ಮಾತು ಎತ್ತಿದ್ರೆ ಇಸ್ರೇಲ್ ಬಗ್ಗೆ ಹೇಳ್ತಿದ್ರು, ಆದ್ರೆ ಏನು ಮಾಡ್ಲಿಲ್ಲಾ. ಸಿಎಂ ಕುಮಾರಸ್ವಾಮಿ ಇಸ್ರೇಲ್ ಮಾದರಿ ಕೃಷಿ ಜಾರಿಗೆ ತಂದಿದ್ದಾರೆ. ಅದಕ್ಕಾಗಿ ₹150 ಕೋಟಿ ಹಣವನ್ನು ಮೀಸಲು ಸಹ ಇಟ್ಟಿದ್ದಾರೆ ಅಂತಾ ತಿಳಿಸಿದ್ರು. ಇನ್ನು ಬಾಗಲಕೋಟೆಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ರೆ ಗೆದ್ದೆ ಗೆಲ್ಲುತ್ತೇನೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv