ಚುನಾವಣೆಯಲ್ಲಿ ಸೋತರೂ ನಾಮಫಲಕ ತೆಗೆಯದ ಮಾಜಿ ಸಚಿವ..!

ಚಿತ್ರದುರ್ಗ: ಮಾಜಿ ಸಚಿವ ಹೆಚ್​​. ಆಂಜನೇಯ ಚುನಾವಣೆಯಲ್ಲಿ ಸೋತರು ತಮ್ಮ ಮನೆಯ ಮುಂದೆ ನಾಮಫಲಕವನ್ನು ತೆಗೆದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ಲಾಸ್ಟಿಕ್​ ಹಾಕಿ ನಾಮಫಲಕವನ್ನು ಮುಚ್ಚಿದ್ದರು. ಚುನಾವಣೆ ನಡೆದು 1 ತಿಂಗಳು ಕಳೆದರೂ ಮಾಜಿ ಸಚಿವರು ತಮ್ಮ ಮನೆಯ ಮುಂದಿನ ನಾಮಫಲಕ ತೆರವುಗೊಳಿಸಿಲ್ಲ.
ಸಚಿವರಾಗಿ ಅಧಿಕಾರ ನಡೆಸಿದ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆಯಿಂದ ಸ್ಪರ್ಧೆ ಮಾಡಿ ಸೋತಿದ್ದರು. ಆದರೆ ಅವರ ಮನೆಯ ಮುಂದೆ ನಾಮಫಲಕದಲ್ಲಿ ಹೆಚ್​​. ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಎಂದು ಇದೆ. ಚುನಾವಣೆಯಲ್ಲಿ ಸೋತ ನಂತರವೂ ನಾಮಫಲಕ ತೆರವುಗೊಳಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv