‘ಹಸಿವಿನ ಬವಣೆಯನ್ನು ಕಣ್ಣಾರೆ ಕಂಡಿದ್ದೇ ಅನ್ನಭಾಗ್ಯ ಯೋಜನೆಗೆ ಪ್ರೇರಣೆ’

ಬೆಂಗಳೂರು: ಹಸಿವಿನ ಬವಣೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅದರ ಪ್ರೇರಣೆಯಿಂದಲೇ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು. ಇದರ ಜೊತೆಗೆ ನನ್ನ ಭಾವನಾತ್ಮಕ ಸಂಬಂಧವೂ ಇದೆ ಎಂದು ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನ್ನಭಾಗ್ಯ ಯೋಜನೆಗೆ ನಮ್ಮ ಸರ್ಕಾರ ₹ 11.564 ಕೋಟಿ ಅನುದಾನ ನೀಡಿತ್ತು. ಒಟ್ಟು ಅಯವ್ಯಯದಲ್ಲಿ ಇದು ದುಬಾರಿ ಏನಲ್ಲ. ಫಲಾನುಭವಿಗಳ ಸಂಖ್ಯೆ 3.85 ಕೋಟಿ. ಜಾತಿ-ಧರ್ಮಕ್ಕೂ ಮೀರಿ ಹೆಚ್ಚಿನ ಜನರನ್ನು ತಲುಪಿರುವ ಯೋಜನೆ ಇದು. ಹೊಸ ಬಜೆಟ್​ನಲ್ಲಿ 2 ಕೆಜಿ ಅಕ್ಕಿ ಕಡಿತ ಮಾಡಿದ್ದು ಆಶ್ಚರ್ಯವಾಗಿದೆ ಎಂದಿದ್ದಾರೆ.

ಅಲ್ಲದೇ, ಅನ್ನಭಾಗ್ಯ ಯೋಜನೆ ಕೇವಲ ಸರ್ಕಾರಿ ಯೋಜನೆಯಲ್ಲ, ಬಡವರ ಹಸಿವು ನೀಗಿಸುವ ಪುಣ್ಯದ ಕೆಲಸ. 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದು ಸರಿಯಲ್ಲ, ಕಡಿತ ಮಾಡಿರುವುದನ್ನು ವಾಪಸ್ ಪಡೆಯಿರಿ, ಇಡೀ ಯೋಜನೆಯನ್ನು ಯಥಾವತ್ತಾಗಿ ಮುಂದುವರೆಸಿ ಎಂದು ಪತ್ರದಲ್ಲಿ ಕೋರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv