ಸದನದಲ್ಲಿ ಹಳೇ ಖದರ್ ತೋರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಷ್ಟು ದಿನ ಸದನದಲ್ಲಿ ಸೈಲಾಂಟಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಹಳೇ ಖದರ್ ತೋರಿಸಿದರು. ಇವತ್ತು ಸಿದ್ದರಾಮಯ್ಯನವರು ಮಾತನಾಡಿದ ವೈಖರಿ ಅವರು ಸಿಎಂ ಆಗಿದ್ದ ದಿನಗಳನ್ನ ನೆನಪಿಸಿತು.
ಕೃಷ್ಣಕೊಳ್ಳದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಯುವಾಗ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು ಹಾಕಿದರು. ‘ಕೃಷ್ಣಾಕೊಳ್ಳದ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕಾದ್ರೆ ಎಷ್ಟು ಹಣ ಬೇಕಾಗುತ್ತದೆ ಹೇಳಿ ನೋಡೋಣ’ ಎಂದು ಪ್ರಶ್ನೆ ಕೇಳಿದರು. ಸಿದ್ದರಾಮಯ್ಯ ಅವರು ಎಸೆದ ಗೂಗ್ಲಿಗೆ ತಿಣುಕಾಡಿದ ಬಸವರಾಜ ಬೊಮ್ಮಾಯಿ, ಕೊನೆಗೆ ಎ-ಸ್ಕೀಂ ಹಾಗೂ ಬಿ-ಸ್ಕೀಂನಿಂದ ಒಟ್ಟು ₹ 50,000 ಕೋಟಿ ಬೇಕಾಗುತ್ತದೆ ಎಂದು ನೀವೇ ಹೇಳಿದ್ದೀರಲ್ಲಾ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv