ವರುಣಾ ಮತದಾರರಿಗೆ ಹೋಳಿಗೆ ಊಟ

ಮೈಸೂರು: ವಿಧಾನ ಸಭಾ ಎಲೆಕ್ಷನ್​ ಮುಗಿದ ನಂತರ ರಿಲ್ಯಾಕ್ಸ್​ ಮೂಡ್​ನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪುತ್ರ, ನೂತನ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಂದ ವರುಣಾ ಮತದಾರರಿಗೆ ಹೋಳಿಗೆ ಊಟ ಆಯೋಜನೆ ಮಾಡಿದ್ರು. ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ವರುಣಾ ಮತದಾರರಿಗೆ ಕೃತಜ್ಞತಾ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಗೆ ಆಗಮಿಸಿದ್ದ, ಸುಮಾರು 6೦೦೦ ಮತದಾರರು, ಕಾಂಗ್ರೆಸ್ ಕಾರ್ಯಕರ್ತರಿಗೆ ಊಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಡಾ.ಯತೀಂದ್ರ ಹೋಳಿಗೆ ಬಡಿಸಿದರು.

ಈ ವೇಳೆ ಮಾತನಾಡಿದ ವರುಣ ಶಾಸಕ ಡಾ.ಯತೀಂದ್ರ, ಇದು ನಮ್ಮ ಕುಟುಂಬದ ಕಾರ್ಯಕ್ರಮ‌. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಅಂತಾ ಹೇಳಿದ್ರು.

ಏನೆಲ್ಲಾ ಖಾದ್ಯಗಳಿದ್ದವು.?
ಹೋಳಿಗೆ, ತುಪ್ಪ, ಪಾಯಸ, ಕೋಸಂಬರಿ, ಅಲಸಂದೆ ಕಾಳು ಪಲ್ಯ, ತರಕಾರಿ ಪಲ್ಯ, ಪೂರಿ, ವೆಜ್ ಕುರ್ಮಾ, ವೆಜಿಟಬಲ್ ರೈಸ್ ಬಾತ್, ಅನ್ನ-ಸಾಂಬಾರ್, ಮೊಸರು ಮತ್ತು ರಸಂ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:cantact@firstnews.tv