ಟಕೆಟ್​ ಸಿಗದಿದ್ದಾಗ ಬಂಡಾಯ ಸಹಜ, ನಾವು ಶಮನ ಮಾಡ್ತೇವೆ-ಸಿದ್ದರಾಮಯ್ಯ

ಹುಬ್ಬಳ್ಳಿ :  ಕುಂದಗೋಳ ಕ್ಷೇತ್ರದಿಂದ ದಿವಂಗತ ಶಿವಳ್ಳಿಯವರ ಪತ್ನಿ ಕುಸುಮಾ ಶಿವಳ್ಳಿಯವರನ್ನು ಕುಂದಗೋಳ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಹೈಕಮಾಂಡ್ ತೀರ್ಮಾನ ಮಾಡಿದೆ. ಅಧಿಕೃತ ಅಭ್ಯರ್ಥಿಯಾಗಿ ಇಂದು ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ನಾಮಪತ್ರ ಸಲ್ಲಿಸುವ ವೇಳೆ ಹಿರಿಯ ಮುಖಂಡರು ಭಾಗವಹಿಸುತ್ತೇವೆ ಎಂದು ತಿಳಿಸಿದ್ರು. ಇದೇ ವೇಳೆ ಶಾಸಕ ರಮೇಶ ಜಾರಕಿಹೊಳಿ ಅಸಮಧಾನ ವಿಚಾರವಾಗಿ ಮಾತನಾಡಿದ ಅವ್ರು ‘ಈಗಾಗಲೇ ಹಲವು ಬಾರಿ ಸಮಾಧಾನ ಪಡಿಸಲು ಯತ್ನಿಸಲಾಗಿದೆ. ಆದರೂ ಅವರ ಮನಃ ಪರಿವರ್ತನೆಯಾಗಿಲ್ಲ, ಮುಂದೆ ಆಗಬಹುದು’ ಎಂದಿದ್ದಾರೆ.

ಇನ್ನು, ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಿವಾನಂದ ಬೆಂತೂರ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ‘ಸಾಮಾನ್ಯವಾಗಿ ಟಿಕೆಟ್ ಸಿಗದೆ ಇರುವ ಟೈಮ್‌ಲ್ಲಿ ಅಸಮಧಾನ ಇರುತ್ತೆ. ಅದನ್ನು ನಾವು ಶಮನ ಮಾಡುತ್ತೇವೆ. ಯಾವುದೇ ರೀತಿ ಬಂಡಾಯ ಏಳಲು ಬಿಡುವುದಿಲ್ಲ. ಯಾರೂ ಬಂಡಾಯನ್ನೂ ಏಳುವುದಿಲ್ಲ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಾನಂದ ಬೆಂತೂರು


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv