ಮತ್ತೆ ಶಾಪಿಂಗ್​ ಮಾಡಿದ ಸಿದ್ದರಾಮಯ್ಯ..!

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಉಪಚುನಾವಣೆಯ ರಾಜಕೀಯ ಬಿಸಿ ಎದ್ದಿದೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಉಪ ಚುನವಣೆಯ ಒತ್ತಡ ನಡುವೆಯೂ ಮತ್ತೆ ಶಾಪಿಂಗ್​ ಮಾಡಿ ಸುದ್ದಿಯಾಗಿದ್ದಾರೆ. ಬೆಂಗಳೂರಿನ ಅವೆನ್ಯೂ ರಸ್ತೆಯ ಖಾದಿ ಭಂಡಾರ್​ಗೆ ತೆರಳಿದ ಸಿದ್ದರಾಮಯ್ಯ ಮಳಿಗೆಯಲ್ಲಿ ಖಾದಿ ಬಟ್ಟೆ ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ವಾಯು ವಿಹಾರಕ್ಕೆ ಬೇಕಾದ ಬಟ್ಟೆಗಳನ್ನು ಸಿದ್ದರಾಮಯ್ಯ ಅವರು ಖರೀದಿಸಿದ್ದರು. ಈಗ ಮತ್ತೊಮ್ಮೆ ಶಾಪಿಂಗ್​​ ಮಾಡಿ ಸುದ್ದಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv