ಅನುಕಂಪ ಇರುವುದು ಬಿಜೆಪಿ ಮೇಲಲ್ಲ, ಕಾಂಗ್ರೆಸ್​ ಮೇಲೆ- ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಜಯನಗರದಲ್ಲಿ‌ ನಮ್ಮ ಗೆಲುವು ನಿರೀಕ್ಷಿತ. ಹಿಂದೆ ಚುನಾವಣೆ ನಡೆದಿದ್ದರು ನಾವೇ ಗೆಲ್ಲುತ್ತಿದ್ದೆವು. ಈಗಲೂ ನಾವೇ ಗೆಲ್ಲುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಆತ್ಮಾಲೋಕನ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿಗಿಂತ ನಮ್ಮ ಅಭ್ಯರ್ಥಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ನಮ್ಮ ಅಭ್ಯರ್ಥಿ ಬಹಳ ಒಳ್ಳೆಯ ಕೆಲಸ ಮಾಡುತ್ತಾ ಚುರುಕಾಗಿ ಓಡಾಡುತ್ತಾರೆ. ಇದು ನಿರೀಕ್ಷಿತ ಫಲಿತಾಂಶ. ಬಿಜೆಪಿ ಬಗ್ಗೆ ಯಾವುದೇ ಕಾರಣಕ್ಕೂ ಅನುಕಂಪ ಇಲ್ಲ. ಅನುಕಂಪ ಇರುವುದು ಕಾಂಗ್ರೆಸ್ ಮೇಲೆ. 78 ಸ್ಥಾನ ಬಂದರು, ಅಧಿಕಾರಕ್ಕಾಗಿ ಅಡ್ಡ ದಾರಿ ಹಿಡಿಯಲಿಲ್ಲ ಎಂಬ ಅನುಕಂಪ ನಮ್ಮ ಮೇಲಿದೆ. ಬಿಜೆಪಿ ಬಹುಮತ ಬರದಿದ್ದರು, ಅಧಿಕಾರ ಹಿಡಿಯಲು ಅಡ್ಡ ದಾರಿ ಹಿಡಿಯಿತು. ಅಂತವರ ಮೇಲೆ ಜನ ಅನುಕಂಪ ತೋರಿಸುತ್ತಾರೆ. ಬಿಜೆಪಿ ಅಧಿಕಾರಕ್ಕಾಗಿ ನಮ್ಮ ಇಬ್ಬರು ಶಾಸಕರನ್ನು ಬುಕ್ ಮಾಡಿತ್ತು. ಬಹುಮತದ ಸಂಖ್ಯೆ ಬಾರದ ಕಾರಣ ಅವರನ್ನು ವಾಪಸ್ಸು ಕಳುಹಿಸಿತ್ತು ಎಂದು ಅವರು ಕಿಡಿಕಾರಿದ್ರು.
ಮೈಸೂರು ಕಾಂಗ್ರೆಸ್ ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿದ್ರು. ಸಭೆಗೂ ಮುನ್ನ ಉಪಹಾರ ಸೇವಿಸಿದ ಸಿದ್ದರಾಮಯ್ಯಗೆ, ಮಾಜಿ ಶಾಸಕರಾದ ವಾಸು, ಸೋಮಶೇಖರ್, ಕಳಲೇ ಕೇಶವಮೂರ್ತಿ, ಅನಿಲ್, ಹಾಗೂ ಶಾಸಕ ತನ್ವೀರ್ ಸೇಠ್ ಸಾಥ್ ನೀಡಿದ್ರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv