ನಾಗೇಶ್ವರ್​ ರಾವ್​ ಪತ್ನಿ ಕಚೇರಿ ಮೇಲೆ ಪೊಲೀಸ್ ರೇಡ್!

ಕೊಲ್ಕತ್ತಾ: ಇತ್ತೀಚೆಗಷ್ಟೇ ಕೊಲ್ಕತ್ತಾ ಪೊಲೀಸ್​ ಕಮೀಷನರ್​ ರಾಜೀವ್​ ಕುಮಾರ್​ ಅವರನ್ನ ಸಿಬಿಐ ವಿಚಾರಣೆ ನಡೆಸಿತ್ತು. ಇದೀಗ ನಗರ ಪೊಲೀಸರು ಹಲವೆಡೆ ದಾಳಿ ನಡೆಸಿದ್ದಾರೆ. ವಿಶೇಷ ಅಂದ್ರೆ, ಸಿಬಿಐನ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ್​ ರಾವ್​ ಪತ್ನಿ ಮನ್ನೇಮ್​ ಸಂಧ್ಯಾ ಮೇಲೆ ಸಿಟಿ ಪೊಲೀಸರು ದಾಳಿ ನಡೆಸಿದ್ದಾರೆ. ಬೌಬಜಾರ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಏಂಜಲಾ ಮರ್ಚೆಂಟೈಲ್ಸ್ ಪ್ರೈ. ಲಿಮಿಟೆಡ್ ಹಾಗೂ ಸಾಲ್ಟ್​ ಲೇಕ್ ಕಂಪನಿಗಳ ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಾಗೇಶ್ವರ್​ ರಾವ್ ಪತ್ನಿ ಸಂಧ್ಯಾ ಮತ್ತು ಕಂಪನಿಗಳ ನಡುವೆ ಅಕ್ರಮ ಹಣ ವರ್ಗಾವಣೆ ನಡೆದಿರೋದು ತನಿಖೆ ವೇಳೆ ಪತ್ತೆಯಾಗಿದೆ. ಹೀಗಾಗಿ ಎರಡು ಕಚೇರಿಗಳ ಮೇಲೆ 30 ಪೊಲೀಸ್​ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಸಂಗ್ರಹಿಸಿದೆ ಎಂದು ಕೊಲ್ಕತ್ತಾ ಪೊಲೀಸರು ಮಾಹಿತಿ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv