‘ಕುಮಾರಸ್ವಾಮಿ ನುಡಿದಂತೆ ರೈತರ ಸಾಲ ಮನ್ನಾ ಮಾಡಲಿ’

ಹಾಸನ: ಸಂಪುಟ ವಿಸ್ತರಣೆಗೂ ಮುನ್ನಾ ಸರ್ಕಾರ ಕಳೆದುಕೊಳ್ಳಬೇಕು ಅನ್ನೋ ‌ಆಸೆ ಇದ್ರೆ ಮಾತ್ರ ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಮಾಡೋದನ್ನ ನಿಲ್ಲಿಸಲಿ ಅಂತಾ ಮಾಜಿ ಡಿಸಿಎಂ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಬೇಲೂರಿನ ಚನ್ನಕೇಶವ ದೇಗುಲಕ್ಕೆ ಭೇಟಿ‌ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಕೂಡಲೇ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆಯಲಿ ಎಂದರು. ಈಗಾಗಲೇ ಬಿಜೆಪಿ ಸಾಂಕೇತಿಕ ಪ್ರತಿಭಟನೆ ಮಾಡಿದೆ. ವಾರದ ಗಡುವಿನೊಳಗೆ ಸಾಲ ಮನ್ನಾ ಮಾಡದೇ ಇದ್ರೆ ಮತ್ತೆ ಹೋರಾಟ ಮಾಡುವುದಾಗಿ ಈಶ್ವರಪ್ಪ ಎಚ್ಚರಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv