‘ರೇವಣ್ಣನ ನೋಟು ರಾಘಣ್ಣನಿಗೆ ವೋಟು’ ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಸಚಿವ ರೇವಣ್ಣ, ಡಿ.ಕೆ ಶಿವಕುಮಾರ್ ಹಣ ಹಂಚಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ , ರೇವಣ್ಣನ ನೋಟು.. ರಾಘಣ್ಣನಿಗೆ ವೋಟು. ಈ ಬಾರಿ ಶಿವಮೊಗ್ಗದಲ್ಲಿ 50 ಸಾವಿರಕ್ಕೂ ಹೆಚ್ಚು  ವೋಟ್​ಗಳ ಲೀಡ್ ಬಿಜೆಪಿಗೆ ಸಿಗುತ್ತದೆ. ನಾನು ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು. ಈ ಬಾರಿ ವಿದ್ಯಾವಂತರು ಅತೀ ಹೆಚ್ಚು ಮತದಾನ ಮಾಡ್ತಾ ಇದಾರೆ. ಕಾಂಗ್ರೆಸ್- ಜೆಡಿಎಸ್ ನಾಯಕರು ಬಂದು ಹೋಗಲಿ ನನಗೇನು ಅಭ್ಯಂತರವಿಲ್ಲ. ಆದ್ರೆ, ಕೆಲ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಹಣ, ಜಾತಿ ರಾಜಕೀಯ ಜೋರಾಗಿ ಮಾಡಿದ್ದಾರೆ ಎಂದು ಅವರು ಮೈತ್ರಿಪಕ್ಷಗಳ ವಿರುದ್ಧ  ವಾಗ್ದಾಳಿ ನಡೆಸಿದರು. ಕಳೆದ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಮುಖಭಂಗವಾಗಿತ್ತು. ಅದಕ್ಕೆ ಈ ಬಾರಿ ಮುಖಭಂಗ ಮಾಡಿಕೊಳ್ಳೋದು ಬೇಡ ಅಂತ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದಿಲ್ಲ. ನಾವು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ತೀವಿ. ಕಾರ್​ ಸ್ಟೆಪ್ನಿಯಲ್ಲಿ ಸಿಕ್ಕ 2.30 ಕೋಟಿ ರೂಪಾಯಿ ನಂದೇ ಅಂತ ಅಪ್ಪಾಜಿಗೌಡರು ಒಪ್ಪಿಕೊಂಡಿದ್ದಾರೆ. ಅದೇನ್ ಲೆಕ್ಕ ತೋರಿಸ್ತಾರೋ ನೋಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್​ನವರು ಜೆಡಿಎಸ್​ನವರನ್ನ ಸೋಲಿಸ್ತಾರೆ. ಜೆಡಿಎಸ್​ನವರು ಕಾಂಗ್ರೆಸ್​ನವರನ್ನ ಸೋಲಿಸ್ತಾರೆ. ಮೇ 23ರ ಫಲಿತಾಂಶ ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತದೆ. ಬಹಳ ಜನ ಶಾಸಕರಿಗೆ ಮೈತ್ರಿ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದು ಅವರು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv