‘ರೈತರ ಸಾಲ ಮನ್ನಾ ಮಾಡಿದರೆ ಬಂದ್ ಕರೆ ವಾಪಸ್ಸು ಪಡೆಯುತ್ತೇವೆ’

ದಾವಣಗೆರೆ: ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆದ ತಕ್ಷಣ ರೈತರ ಸಾಲಮನ್ನಾ ವಿಚಾರದಲ್ಲಿ ಯುಟರ್ನ್​ ಹೊಡೆದಿದ್ದಾರೆ ಅಂತ ವಿಧಾನ ಪರಿಷತ್​ ವಿಪಕ್ಷದ ನಾಯಕ ಕೆ.ಎಸ್​. ಈಶ್ವರಪ್ಪ ಆರೋಪಿಸಿದ್ದಾರೆ. ಹರಿಹರ ತಾಲೂಕಿನ ಬೆಳ್ಳೂಡಿಯ ಕಾಗಿನೆಲೆ ಪೀಠದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಸಿಎಂಗೆ ಸೋಮವಾರದವರೆಗೆ ಗಡುವು ನೀಡಿದ್ದೇವೆ. ರೈತರ ಸಾಲ ಮನ್ನಾ ಮಾಡಿದರೆ ಬಂದ್ ಕರೆ ವಾಪಸ್ಸು ಪಡೆಯುತ್ತೇವೆ. ಇಲ್ಲದೇ ಇದ್ದರೆ ಕರ್ನಾಟಕ‌ ಬಂದ್ ಮಾಡುವುದು ಶತಸಿದ್ಧ ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ.
ಇದೇವೇಳೆ ಮಾತನಾಡಿದ ಅವರು ಸಾಣೆಹಳ್ಳಿ‌ ಶ್ರೀಗಳು ಹಲವು ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕುಮಾರಸ್ವಾಮಿ ಮೂಗಿನ ನೇರಕ್ಕೆ ಸ್ವಾಮೀಜಿಗಳು ಸ್ಪಂದಿಸದೇ ಇದ್ದಾಗ ಶ್ರೀಗಳಿಗೆ ಮಾಡಿದ ಅವಮಾನ ಮಾಡಿದ್ದಾರೆ. ಇದು ಇಡೀ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಅವರು ಕಿಡಿಕಾರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv