‘ಒಂದಲ್ಲ ಎರಡಲ್ಲ’ ಸಿನಿಮಾಕ್ಕೆ ಮತ್ತೊಂದು ಗರಿ

ಈ ನಡುವೆ ಕೆಲವು ಕನ್ನಡ ಸಿನಿಮಾಗಳು ಸದ್ದಿಲ್ಲದೆ ಸುದ್ದಿಯಾಗ್ತಾ ಇರ್ತವೆ. ಸಿನಿಮಾ ಥಿಯೇಟರ್​ಗಳಲ್ಲಿ ಅಷ್ಟಾಗಿ ಅಬ್ಬರಿಸದೇ ಹೋದರು, ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಪಡೀತವೆ. ಬರೀ ಪ್ರೇಕ್ಷಕರಷ್ಟೆ ಅಲ್ಲದೇ ವಿಮರ್ಶಕರಿಂದಲೂ ಒಳ್ಳೆ ರೆಸ್ಪಾನ್ಸ್​ ಪಡೆದುಕೊಳ್ತವೆ. ಇಂಥದ್ದೇ ಸಿನಿಮಾಗಳ ಲಿಸ್ಟ್​​ಗೆ ‘ಒಂದಲ್ಲ ಎರಡಲ್ಲ’ ಸಿನಿಮಾ ಕೂಡ ಸೇರಿಕೊಳ್ಳುತ್ತೆ. ಅಂದಹಾಗೆ ಕಳೆದ ವರ್ಷ ರಿಲೀಸ್​ ಆಗಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಒಳ್ಳೆ ಪ್ರತಿಪ್ರಿಯೆ ಪಡೆದಿದ್ದ ಸಿನಿಮಾಕ್ಕೆ ಈಗ ಮತ್ತೊಂದು ಗೌರವ ಸಿಕ್ಕಿದೆ. ಕನ್ನಡದ ಅದ್ಭುತ ಸಿನಿಮಾಗಳಲ್ಲಿ ಒಂದಾದ ‘ರಾಮ ರಾಮ ರೇ’ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ, ‘ಒಂದಲ್ಲ ಎರಡಲ್ಲ’ ಸಿನಿಮಾಕ್ಕೆ ಕ್ರಿಟಿಕ್​ ಚಾಯ್ಸ್​​ ಫಿಲಂ ಅವಾರ್ಡ್ಸ್​​ ಸಿಕ್ಕಿದೆ. ಹೆಬ್ಬುಲಿ ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸ್​ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ರು. ನಿನ್ನೆ ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಸತ್ಯ ಪ್ರಕಾಶ್​ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೇಶದ ವಿಮರ್ಶಕರ ಸೊಸೈಟಿಯಿಂದ ನೀಡಲ್ಪಡುವ ಸಿಸಿಎಫ್​ಎ ದಕ್ಷಿಣದ ಅತ್ಯುತ್ತಮ ಸಿನಿಮಾ ಅವಾರ್ಡ್​ ಬಾಚಿಕೊಂಡಿದೆ.