ಬೆಂಗಳೂರು ಉತ್ಸವಕ್ಕೆ ಬರಲ್ವಂತೆ ಚೇತನ್​ ಭಗತ್​​, ಕಾರಣ ಏನು ಗೊತ್ತಾ?

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಈ ಬಾರಿ ನಡೆಯುವ ‘ಬೆಂಗಳೂರು ಸಾಹಿತ್ಯ ಉತ್ಸವ-2018’ರಲ್ಲಿ ಇಂಗ್ಲೀಷ್​ ಲೇಖಕ ಹಾಗೂ ಅಂಕಣಕಾರ ಚೇತನ್​ ಭಗತ್​ ಭಾಗಿಯಾಗ್ತಿಲ್ಲ ಅಂತಾ ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ. ಚೇತನ್​ ಭಗತ್​ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಅಂತಾ ಆಯೋಜಕರು ಅಧಿಕೃತವಾಗಿ ಘೋಷಣೆ ಮಾಡದೆ ಇದ್ರೂ, ತಮ್ಮ ಹೊಸ ಕಾದಂಬರಿ ‘ದಿ ಗರ್ಲ್ ಇನ್​ ರೂಮ್​​ 105’ ಪುಸ್ತಕದ ಪ್ರಚಾರಕ್ಕಾದರೂ ಬರ್ತಾರೆ ಎಂದು ಹೇಳಲಾಗ್ತಿತ್ತು.
ಕಳೆದೊಂದು ವಾರದಿಂದ ಚೇತನ್​ ಭಗತ್​ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರ್ತಿದ್ದು, ಅನೇಕ ಮಹಿಳೆಯರು ಸೋಷಿಯಲ್​ ಮಿಡಿಯಾದಲ್ಲಿ ಚೇತನ್ ವಿರುದ್ಧ ತಿರುಗಿಬಿದ್ದಿದ್ರು. ಹೀಗಾಗಿ ಚೇತನ್​ ಭಗತ್​ರನ್ನ ಆಯೋಜಕರು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಈ ಎಲ್ಲಾ ಗಾಳಿ ಮಾತುಗಳಿಗೂ ತೆರೆ ಎಳೆದಿರುವ ಕಾರ್ಯಕ್ರಮದ ಆಯೋಜಕರು, ಅವರ ಮೇಲೆ ಅಪಾದನೆಗಳು ಇರೋದ್ರಿಂದ ಕರೆದಿಲ್ಲ ಅಂತಾ ಹೇಳೋದೆಲ್ಲ ಸುಳ್ಳು. ಚೇತನ್​ ಭಗತ್​ ಮೂರು ತಿಂಗಳಿಂದ ನಮ್ಮ ಸಂಪರ್ಕದಲ್ಲಿದ್ದಾರೆ. ಬಿಡುವಿಲ್ಲದ ಕೆಲಸಗಳ ನಡುವೆ ಸಿಲುಕಿರುವುದರಿಂದ ಅವರು ಈ ಬಾರಿ ಕಾರ್ಯಕ್ರಮಕ್ಕೆ ಬರ್ತಿಲ್ಲ ಅಂತಾ ಹೇಳಿದ್ದಾರೆ.
ಇನ್ನು ಈ ಬೆಂಗಳೂರು ಸಾಹಿತ್ಯ ಉತ್ಸವ ಅಕ್ಟೋಬರ್​ 27 ಹಾಗೂ 28ರಂದು ನಗರದ ಲಲಿತ್​ ಅಶೋಕ್​ ಹೋಟೆಲ್​ನಲ್ಲಿ ನಡೆಯಲಿದ್ದು, ದೇಶದ 150ಕ್ಕೂ ಹೆಚ್ಚು ಪ್ರಸಿದ್ಧ ಬರಹಗಾರರು ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv