ಪಾಂಡ್ಯಾ ಮಾರಕ ಬೌಲಿಂಗ್​ ದಾಳಿ, ಪೆವಿಲಿಯನ್​ ಪರೇಡ್​ ನಡೆಸಿದ ಆಂಗ್ಲ ಬ್ಯಾಟ್ಸ್​ಮನ್ಸ್​

ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್​ನ ನಾಟಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ನಲ್ಲಿ ಭಾರತೀಯ ಬೌಲರ್​ಗಳು ದರ್ಬಾರ್​ ನಡೆಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡವನ್ನ 161 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿ ಆಗಿದ್ದಾರೆ. ರವಿಚಂದ್ರನ್​ ಅಶ್ವಿನ್​ ಗಾಯಗೊಂಡ ಕಾರಣ, ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್​ ದಾಳಿ ನಡೆಸಿದ ಟೀಮ್​ ಇಂಡಿಯಾಗೆ ಹಾದಿರ್ಕ್​ ಪಾಂಡ್ಯ ನೆರವಾದ್ರು. ಪಾಂಡ್ಯಾ ದಾಳಿಗೆ ಆಂಗ್ಲ ಬ್ಯಾಟ್ಸ್​ಮನ್ಸ್​ ಪೆವಿಲಿಯನ್​ ಪರೇಡ್​ ನಡೆಸಿದರು. ಇನ್ನು 6 ಓವರ್​ಗಳನ್ನು ಬೌಲ್​ ಮಾಡಿದ ಹಾರ್ದಿಕ್ ಪಾಂಡ್ಯಾ​ 5 ವಿಕೆಟ್​ ಪಡೆದುಕೊಂಡ್ರೆ, ವೇಗಿ ಬುಮ್ರಾ ಹಾಗೂ ಇಶಾಂತ್​ ಶರ್ಮ ತಲಾ ಎರಡು ವಿಕೆಟ್​ ಪಡೆದುಕೊಂಡರು. ಚೊಚ್ಚಲ ಪಂದ್ಯದಲ್ಲೇ ವಿಕೆಟ್​ ಕೀಪರ್​ ರಿಷಬ್​ ಪಂಥ್​ 5 ಕ್ಯಾಚ್​ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದರು. ಫಾಲೋ ಆನ್​ನಿಂದ ತಪ್ಪಿಸಿಕೊಂಡಿರುವ ಇಂಗ್ಲೆಂಡ್ 168ರನ್​ಗಳ ಹಿನ್ನಡೆ ಅನುಭವಿಸಿದೆ. ಇನ್ನು, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 329 ರನ್​ಗಳಿಸಿತ್ತು.