ಅಯ್ಯೋ ಅವಳು ಯಾರ್ ಜೊತೆ ಮದುವೆಯಾಗಿದ್ದಾಳೆ ಗೊತ್ತಾ..?

ಗಂಡು ಹೆಣ್ಣು ಮದುವೆ ಆಗೋದು ಕಾಮನ್​. ಸ್ವಲ್ಪ ಟ್ರೆಂಡ್​ ಅಂದ್ರೇ ಸಲಿಂಗಿಗಳ ಮದುವೆ. ಆದ್ರೆ ಇವರೆಲ್ಲರಿಗಿಂತ ಫುಲ್​ ಟ್ರೆಂಡ್ ಅಂದ್ರೆ ಜೀವ ಇಲ್ಲದಿರೋ ವಸ್ತುಗಳ ಜೊತೆ ಮದುವೆ ಮಾಡಿಕೊಳ್ಳೋದು. ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಫಾರ್ ಎಕ್ಸಾಂಪಲ್‌ ಪ್ಯಾರಿಸ್​ನ ಐಫಿಲ್​ ಟವರ್​ ಜೊತೆ ಒಬ್ಬ ಯುವಕ ಮದುವೆಯಾಗಿದ್ದ. ಯಾಕಂದ್ರೆ ಆ ಟವರ್​ ಅಂದ್ರೇ ಅವನಿಗೆ ಅಷ್ಟು ಇಷ್ಟ. ಹಂಗೇ ಜೀವವೇ ಇಲ್ಲದಿರೋ ಗೊಂಬೆಯ ಜೊತೆ ಒಬ್ಬ ಯುವಕ ಮದುವೆಯನ್ನ ಧಾಮ್ ಧೂಮ್‌ ಅಂತಾ ಮಾಡಿಕೊಂಡಿದ್ದ. ಆದ್ರೆ ಇಲ್ಲಿ ಒಬ್ಬ ಮಹಿಳೆ, ತೂಗು ದೀಪದ ಜೊತೆ ಮದುವೆಯಾಗಿದ್ದಾಳೆ.

ಯಪ್ಪಾ..ಯಾಕೆ ಇದರ ಜೊತೆ ಮದುವೆಯಾದ್ರೂ..?
34 ವರ್ಷದ ಅಮಾಂಡಾ ಲಿಬರ್ಟಿ ಅನ್ನೋ ಮಹಿಳೆ ಮೂಲತಃ ಜರ್ಮನಿಯವಳು. ಈಬೇ (Online shopping) ನೋಡಬೇಕಾದ್ರೇ, 91 ವರ್ಷದ ತೂಗುದೀಪ ನೋಡಿದ್ದಾರೆ. ಅದನ್ನ ನೋಡಿದ ತಕ್ಷಣ ಅಮಾಂಡಾಗೆ ಲವ್​ ಅಟ್​ ಫಸ್ಟ್​ ಸೈಟ್​ ಆಯಿತಂತೆ. ಆಗ್ಲೇ ನೋಡಿ ಅವರು ಆ ಶಾಂಡೆಲಿಯರ್​ ಜೊತೆನೇ ಮದುವೆ ಆಗ್ಬೇಕು ಅಂತಾ ಡಿಸೈಡ್ ಮಾಡಿದ್ರು. ಅವರು ಅಂದುಕೊಂಡಂತೆಯೇ ಸೀಲಿಂಗ್‌ ಲೈಟ್‌ ಜೊತೆ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಲ್ಲದೇ, ತಮ್ಮ ಕೈ ಮೇಲೆ ಶಾಂಡೆಲಿಯರ್‌ ಟ್ಯಾಟೂ ಹಾಕಿಸಿದ್ದಾರೆ. ಅಲ್ಲದೇ, ಅದನ್ನ ಅವ್ರು ಸಿಕ್ಕಾಪಟ್ಟೆ ಲವ್​ ಕೂಡ ಮಾಡ್ತಾರಂತೆ. ಈ ಸುದ್ದಿ ಕೇಳಿದ ಜನರೀಗ ಹೀಗೂ ಮದುವೆಯಾಗ್ತಾರಾ ಅಂತಾ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ವಿಶೇಷ ಬರಹ: ರಕ್ಷಾ ಪ್ರಸಾದ್​