ಬೆತ್ತಲಾದವರು..!

ಸಾರ್ವಜನಿಕರ ಎದ್ರು ಬಟ್ಟೆ ಬಿಚ್ಚೋದು ಅಂದ್ರೆ ಕಮ್ಮಿ ವಿಚಾರ ಅಲ್ಲ! ಮಹಿಳೆಯೊಬ್ರು ಬಿಚ್ಚಮ್ಮನ ಥರ ಎಲ್ಲಿಯಾದ್ರೂ ಬಟ್ಟೆ ಬಿಚ್ಚಿದ್ರೆ ಏನೆಲ್ಲಾ ಮಾತುಗಳು ಬರುತ್ವೆ, ನೋಟಗಳು ಹೆಂಗೆಲ್ಲಾ ಇರುತ್ವೆ ಅನ್ನೋದನ್ನ ಉಹಿಸೋದೇ ಕಷ್ಟ. ಅದೇನೇ ಇರಲಿ. ಇತ್ತೀಚೆಗೆ ವಿದೇಶಗಳಲ್ಲಿ ಬೆತ್ತಲೆ ಯೋಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಆಸ್ಟ್ರೇಲಿಯಾದ ಮಹಿಳೆಯರು ದೇಹದ ಬಗ್ಗೆ ಪಾಸಿಟಿವ್ ಥಿಂಕಿಂಗ್ ಬೆಳೆಸುವ ಸಂಬಂಧ ಮೈಮೇಲಿನ ಬಟ್ಟೆಯನ್ನ ಬಿಚ್ಚಿ ಫೋಟೋ ಶೂಟ್ ಮಾಡಿಸಿ ಸುದ್ದಿ ಆಗಿದ್ದಾರೆ.

ವಿಕ್ಟೋರಿಯಾ ಮೂಲದ 56 ಮಹಿಳೆಯರು ತಂಡವೊಂದು ತಮ್ಮ ಮೈಮೇಲಿರುವ ಬಟ್ಟೆಯನ್ನ ಬಿಸಾಡಿ ಗುಡ್ಡಗಾಡುಗಳನ್ನ ಸುತ್ತಿ ಫೋಟೋ ಶೂಟ್ ಮಾಡಿಸಿದ್ದಾರೆ.

ದೇಹವನ್ನ ಶಸಕ್ತಗೊಳಿಸಲು ಕಳೆದ 2017ರಲ್ಲಿ ಈ ಮಹಿಳಾ ಮಣಿಗಳು ಈ ನಿರ್ಧಾರ ತೆಗೆದುಕೊಂಡಿದ್ದರು. ಅದಕ್ಕೆ ಈಗ ಕಾಲಕೂಡಿ ಬಂದಿದ್ದು  ಬ್ರಿಸ್​ಬೇನ್, ಕ್ಯೂನ್ ಐಸ್​ಲ್ಯಾಂಡ್​ನ ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ಬೆತ್ತಲಾಗಿ ಮುಕ್ತಮುಕ್ತವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.

ತಮ್ಮ ದೇಹವನ್ನು ಹೆಚ್ಚು ಆಕರ್ಷಿಸುವಂತೆ ಪೇಂಟಿಂಗ್ ಮಾಡ್ಕೊಂಡು ಲವಲವಿಕೆಯಿಂದ ಫುಲ್ ಹ್ಯಾಪಿ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಮೂವರು ವ್ಯಕ್ತಿಗಳು ಮೂರು ತಾಸುಗಳ ಕಾಲ ಫೋಟೋ ಶೂಟ್ ಮಾಡಿದ್ದಾರೆ. ಇನ್ನು, ಮಹಿಳೆಯರು ಫೋಟೋ ಶೂಟ್ ಕಾರ್ಯಕ್ರಮದಲ್ಲಿ ಯಾವುದೇ ನಿರ್ಬಂಧಗಳನ್ನ ಹೇರಲಾಗಿರಲಿಲ್ಲ. ಎಲ್ಲಾ ವಯಸ್ಸಿನ ಮಹಿಳೆಯರೂ ಭಾಗವಹಿಸಿದ್ದರು ಅನ್ನೋದು ವಿಶೇಷ.

 

ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿರುವ ಬಗ್ಗೆ ಆಯೋಜಕರು ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಆದರೆ ಬೆತ್ತಲೆ ಫೋಟೋ ಶೂಟ್​ನಲ್ಲಿ ಭಾಗವಹಿಸಿದ್ದ ಸದಸ್ಯರು ಮಾತ್ರ ಮಾಧ್ಯಮಗಳ ಮುಂದೆ ಮನಬಿಚ್ಚಿ ಮಾತನಾಡಿದ್ದಾರೆ. ನಮ್ಮ ದೇಹದ ಬಗ್ಗೆ ಪಾಸಿಟಿವ್ ಭಾವನೆ ಮೂಡುವ ಉದ್ದೇಶದಿಂದ ನಗರ ಜೀವದಿಂದ ದೂರದ ಗುಡ್ಡಗಾಡು ಪ್ರದೇಶಗಳಿಗೆ ಬಂದು ಪೋಸ್ ನೀಡಿದ್ದೇವೆ. ಇದರಿಂದ ನಮಗೆ ಮನಸ್ಸಿನ ನೆಮ್ಮದಿ, ದೈಹಿಕ ಖುಷಿ, ಭಾವನಾತ್ಮಕ ಸಂಬಂಧದ ಬಗ್ಗೆ ಸಕರಾತ್ಮಕವಾಗಿ ಯೋಚನೆ ಮಾಡುವಂತೆ ಮಾಡಿದೆ ಎಂದು ಓರ್ವ ಮಹಿಳೆ ಹೇಳಿದ್ದಾರೆ.

ನಾವು, ರಸ್ತೆ ಒಂದರಲ್ಲಿ ನಾವು ನಮ್ಮ ದೇಹವನ್ನ ಪ್ರೀತಿ ಮಾಡೋದು ಸುಲಭವಲ್ಲ. ಒಂದು ವೇಳೆ ಹಾಗೆ ಮಾಡಿದರೆ ಯಾರೂ ಕೂಡ ನಮ್ಮನ್ನ ನಂಬದೇ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ. ಆದರೆ ಇಂತಹ ಭಾವನೆಗಳು ದೂರ ಆಗಬೇಕಿದೆ. ಇದರಿಂದ ನಾನು ನನ್ನ ದೇಹವನ್ನ ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ ಎಂದು ಮತ್ತೋರ್ವ ಮಹಿಳೆಯೊಬ್ಬರು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv