ಕಾಲಿಗೆ ಪೆಟ್ಟಾಗಿ ನರಳುತ್ತಿರುವ ಕಾಡಾನೆ, ಚಿಕಿತ್ಸೆ ನೀಡುವಂತೆ ಗ್ರಾಮಸ್ಥರ ಒತ್ತಾಯ

ಹಾಸನ: ಸಕಲೇಶಪುರ ತಾಲ್ಲೂಕಿನಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೇ ಕಾಡಾನೆಯೊಂದು ನೋವಿನಿಂದ ನರಳುತ್ತಿರುವುದು ಕಂಡು ಬಂದಿದೆ. ಆಲೂರು-ಸಕಲೇಶಪುರ ಭಾಗದ ಜನರಿಂದ ಭೀಮನೆಂದು ನಾಮ ಕರಣ ಮಾಡಿಸಿಕೊಂಡಿದ್ದ ಆನೆಯ ಕಾಲಿಗೆ ಪೆಟ್ಟಾಗಿದ್ದು, ಗ್ರಾಮದೊಳಗೇ ಕುಂಟುತ್ತಲೇ ಓಡಾಡುತ್ತಿದೆ. ಆನೆ ಗ್ರಾಮದೊಳಗೆ ಓಡಾಡುತ್ತಿದ್ದರು, ಯಾವುದೇ ತೊಂದರೆ ನೀಡುತ್ತಿಲ್ಲ ಎನ್ನಲಾಗಿದೆ. ಕಾಡಾನೆಗೆ ಸೂಕ್ತ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಎಂದು ವನ್ಯಜೀವಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರ ಚಿಕಿತ್ಸೆ ನೀಡಿ ಕಾಡಾನೆಗೆ ನೆರವಾಗುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಹಿಂದೆ ಕಾಲಿಗೆ ಪೆಟ್ಟಾಗಿ ಕಾಡಾನೆಯೊಂದು ಗಾಯವಾಗಿ ಗುಣವಾಗದೇ ಮೃತಪಟ್ಟಿತ್ತು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv