ನೀರು ಕುಡಿಯಲು ಬಂದು ಕೆರೆಯಲ್ಲಿ ಸಿಲುಕಿಕೊಂಡ ಕಾಡಾನೆಗಳ ಹಿಂಡು

ಕೊಡಗು:  ನೀರು ಕುಡಿಯಲು ಬಂದ  ಆನೆಗಳ ಹಿಂಡು ಕೆರೆಯಲ್ಲಿ ಸಿಲುಕಿಕೊಂಡ ಘಟನೆ,  ಜಿಲ್ಲೆಯ ಪಾಲಂಗಾಲ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಕರಿನೆರವಂಡ ಕುಟುಂಬದವರಿಗೆ ಸೇರಿದ ಕೆರೆ ಇದಾಗಿದ್ದು, ಕೆರೆಯೊಳಗಿರುವ ಐದು ಕಾಡಾನೆಗಳು ಸಿಕ್ಕಿಹಾಕಿಕೊಂಡಿದೆ. ಬೆಳಗ್ಗೆ ವಾಕಿಂಗ್ ಹೋದ ವೇಳೆ ಗ್ರಾಮಸ್ಥರು ಆನೆಗಳನ್ನ ನೋಡಿದ್ದು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಜೆಸಿಬಿ ಮೂಲಕ ಕೆರೆಯನ್ನ ಅಗಲ ಮಾಡಿ, ಆನೆಗಳನ್ನ ಮೇಲಕ್ಕೆತ್ತಿದ್ದಾರೆ.  ಕಳೆದ ಕೆಲ ದಿನಗಳ ಹಿಂದೆ ಇದೇ ಜಾಗದಲ್ಲಿ ವ್ಯಕ್ತಿಯೊಬ್ಬರನ್ನು ಕಾಡಾನೆ ಬಲಿ ತೆಗೆದುಕೊಂಡಿತ್ತು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv