ಗುಂಡೇಟಿನಿಂದ ಮೃತಪಟ್ಟ ಆನೆ: ಸ್ಥಳೀಯರ ಬಂದೂಕುಗಳ ತಪಾಸಣೆ

ಕೊಡಗು: ಕಳೆದ ಮಾರ್ಚ್ 29ರಂದು ವಿರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ಪ್ರವೀಣ್ ಎಂಬುವವರ ತೋಟದಲ್ಲಿ ಭಾರೀ ಗಾತ್ರದ ಗಂಡಾನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಆನೆ ಶವಪರೀಕ್ಷೆ ವೇಳೆ ದೇಹದಲ್ಲಿ ಗುಂಡು ತಗುಲಿರುವ ಗುರುತು ಕಂಡುಬಂದಿತ್ತು. ಈ ಸಂಬಂಧ ಕ್ರಿಮನಲ್ ಪ್ರಕರಣ ಕೂಡಾ ದಾಖಲಾಗಿತ್ತು, ಆದ್ರೆ ಆರೋಪಿಗಳು ಮಾತ್ರ ಸಿಕ್ಕಿರಲಿಲ್ಲ. ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದ್ದು, ಆನೆ ಮೃತಪಟ್ಟ ತೋಟದ ಸಮೀಪವಿರುವ ನಿವಾಸಿಗಳ ಬಂದೂಕು ವಶಕ್ಕೆ ಪಡೆದಿದ್ದಾರೆ. ಕೆ.ಉತ್ತಪ್ಪ, ಕೆ.ಪ್ರವೀಣ್, ಕೆ.ಕಾರ್ಯಪ್ಪ, ಮತ್ತು ಕೆ.ಪಿ. ಮುತ್ತಪ್ಪ ಎಂಬುವವರ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಆನೆ ದೇಹದಲ್ಲಿ ಪತ್ತೆಯಾದ ಗುಂಡು ಈ ಸ್ಥಳೀಯರ ಯಾರುದಾದರೂ ಒಬ್ಬರ ಬಂದೂಕಿನಿಂದ ಗುಂಡು ಹಾರಿಸಿದ ಸುಳಿವಿದೆಯಾ ಅಂತ ಪರೀಕ್ಷೆ ಮಾಡೋದಕ್ಕೆ ಪೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv