ಅವ್ರು ಎಂಟ್ರಿ ಕೊಟ್ರೆ ಏನೂ ಉಳಿಯಲ್ಲ!

ರಾಮನಗರ: ಕಾಡಾನೆ ದಾಳಿಯಿಂದ ರೈತರು ಬೆಳೆದಿದ್ದ ಬೆಳೆಯೆಲ್ಲಾ ಸಂಪೂರ್ಣ ನಾಶವಾಗಿದೆ. ರಾಮನಗರ ತಾಲೂಕಿನ ನಂಜಾಪುರ ಗ್ರಾಮದಲ್ಲಿ ಮೂರು ಕಾಡಾನೆಗಳು ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿವೆ.

ಆನೆಗಳ ದಾಳಿಗೆ ಯೋಗೇಶ್, ಸತೀಶ್, ಚಿಕ್ಕರಾಜು ಹಾಗೂ ಲಿಂಗರಾಜು ಎನ್ನುವವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ಮಾವಿನ ಬೆಳೆ ನಾಶವಾಗಿದೆ. ತೋಟದಿಂದ ಕಾಲ್ಕಿತ್ತಿರುವ ಆನೆಗಳು ಸದ್ಯ ತೆಂಗಿನಕಲ್ಲು ಅರಣ್ಯದಂಚಿನಲ್ಲಿ ಬೀಡು ಬಿಟ್ಟಿರುವ ಅನುಮಾನ ವ್ಯಕ್ತವಾಗಿದೆ. ಆನೆಗಳ ಹಾವಳಿಗೆ ಬೇಸೆತ್ತ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *