ವಿದ್ಯುತ್ ತಂತಿಯಲ್ಲಿ ‘ಮಿಂಚಿನ ಕರೆಂಟ್!’

ಹಾಸನ: ಬೇಲೂರು ತಾಲೂಕು ಹಿರಿಗರ್ಜೆ ಕೊಪ್ಪಲು ಬಳಿ ವಿದ್ಯುತ್ ಕಂಬದಲ್ಲಿ ರಿಪೇರಿ ಮಾಡುತ್ತಿದ್ದ ನಾಲ್ವರು ಗುತ್ತಿಗೆ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ವಿವಿಧೆಡೆ ಭಾರೀ ಗಾಳಿಸಹಿತ ಮಳೆಯಾಗುತ್ತಿದ್ದು, ಗುಡುಗು ಮಿಂಚು ವೇಳೆ ವಿದ್ಯುತ್ ತಂತಿಯಲ್ಲಿ ಕರೆಂಟ್ ಪ್ರವಹಿಸಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ರಘು,ಸ್ವಾಮಿ,ವಿಶ್ವ ಮತ್ತು ಮಂಜುಗೆ ವಿದ್ಯುತ್ ತಗುಲಿದೆ. ತಕ್ಷಣವೇ ಕೆಳಗೆ ಹಾರಿದ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಮಿಕರು ಬೇಲೂರು ತಾಲೂಕಿನ ಚಿಕ್ಕ ಬಿಕ್ಕೋಡು ಗ್ರಾಮದವರಾಗಿದ್ದಾರೆ. ಕೆಳಗೆ ಹಾರಿ ಬಿದ್ದ ಕಾರಣ ಇಬ್ಬರಿಗೆ ಮೂಳೆ ಮುರಿದಿದೆ. ಗಾಯಗೊಂಡ ಇಬ್ಬರನ್ನು ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಹಾಸನಕ್ಕೆ ರವಾನೆ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv