ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ

ಬೆಂಗಳೂರು: ಲೈನ್ ತುಂಡರಿಸಿ ರಸ್ತೆಗೆ ವಿದ್ಯುತ್ ತಂತಿಯೊಂದು ಬಿದ್ದ ಘಟನೆ ಆನೇಕಲ್ -ಚಂದಾಪುರ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ. ಈ ವೇಳೆ ಎಚ್ಚೆತ್ತ ಆನೇಕಲ್ ನಾಗರೀಕರು ಯಾರಿಗೂ ಅಪಾಯವಾಗದಂತೆ ನೋಡಿಕೊಂಡಿದ್ದಾರೆ. ಈ ವೇಳೆ ಎರಡೂ ಕಡೆ ವಾಹನ ಸವಾರರನ್ನು ತಡೆದು ಅವಘಡವನ್ನು ತಪ್ಪಿಸಿದ್ದಾರೆ.

ಇನ್ನು ಕೂಡಲೇ ಸ್ಥಳಕ್ಕೆ ಆನೇಕಲ್ ಬೆಸ್ಕಾಂ ಸಿಬ್ಬಂದಿ ಆಗಮಿಸಿ ವಿದ್ಯುತ್, ಪ್ರಸರಣ ತಪ್ಪಿಸಿ, ತಂತಿಯನ್ನ ಕತ್ತರಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅವಘಡ ತಪ್ಪಿಸಿದ ರಸ್ತೆ ಸಂಚಾರಿಗಳ ಕ್ರಮಕ್ಕೆ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv