ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್​ ನಾಯಕರಿಂದ ಸಾಲು ಸಾಲು ರಾಜೀನಾಮೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯ ಸೋಲು ಕಂಡ ಹಿನ್ನೆಲೆ ಕಾಂಗ್ರೆಸ್​ ನಾಯಕರು ಸಾಲುಸಾಲಾಗಿ ರಾಜೀನಾಮೆ ನೀಡ್ತಿದ್ದಾರೆ. ಲೋಕಸಭೆಗೆ ಅತೀ ಹೆಚ್ಚು ಸಂಸದರನ್ನ ಕಳಿಸೋ ಉತ್ತರಪ್ರದೇಶದಲ್ಲೂ ಕಾಂಗ್ರೆಸ್​​ ನೆಲಕಚ್ಚಿರೋ ಕಾರಣ ರಾಜ್ಯ ಕಾಂಗ್ರೆಸ್​​ ಮುಖ್ಯಸ್ಥ ರಾಜ್​ ಬಬ್ಬರ್​​​ ರಾಜೀನಾಮೆ ನೀಡಿದ್ದಾರೆ. ಇತ್ತ ಕರ್ನಾಟಕ ಕಾಂಗ್ರೆಸ್​ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಹೆಚ್​​​.ಕೆ.ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಇನ್ನು ಒಡಿಶಾ ಪ್ರದೇಶ್​​ ಕಾಂಗ್ರೆಸ್ ಕಮಿಟಿ​ ಮುಖ್ಯಸ್ಥ ನಿರಂಜನ್ ಪಟ್ನಾಯಕ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಇವರೆಲ್ಲರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅವರು ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ

ಈ ಬಾರಿ ಕಾಂಗ್ರೆಸ್​ನ ಬ್ರಹ್ಮಾಸ್ತ್ರ ಎಂದೇ ಪರಿಗಣಿಸಲಾಗೋ ಪ್ರಿಯಾಂಕಾ ವಾದ್ರಾ ರಾಜಕೀಯಕ್ಕೆ ಎಂಟ್ರಿ ಕೊಟ್ಟರೂ ಕೂಡ ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಕ್ಲೀನ್ ಸ್ವೀಪ್ ಆಗಿದೆ. ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಸಹೋದರ ರಾಹುಲ್ ಹಾಗೂ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ಮಾಡಿದ್ದರು. ಆದರೂ ಕೂಡ ದಶಕಗಳಿಂದ ಕಾಂಗ್ರೆಸ್​ ಭದ್ರಕೋಟೆಯಾಗಿದ್ದ ಅಮೇಥಿ ಈ ಬಾರಿ ಬಿಜೆಪಿಯ ಪಾಲಾಗಿದೆ. ಒಂದೆಡೆ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಪಡೆದು ಪೂರ್ಣ ಬಹುಮತ ಹೊಂದಿದ್ದರೆ, ಕಾಂಗ್ರೆಸ್​ ಮೂರಂಕಿ ಕೂಟ ದಾಟಿಲ್ಲ.  ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಮಾತ್ರ ರಾಯ್​ ಬರೇಲಿಯಿಂದ ಗೆದ್ದ್ದಿದ್ದಾರೆ. ಈ ಮೂಲಕ 80 ಸೀಟ್​ಗಳ ಉತ್ತರಪ್ರದೇಶದಲ್ಲಿ ಕೇವಲ ಒಂದು ಸೀಟ್​​ಗೆ ಕಾಂಗ್ರೆಸ್​​ ತೃಪ್ತಿಪಟ್ಟುಕೊಂಡಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv