ಊಟ ಒದಗಿಸದ ಚುನಾವಣಾ ಆಯೋಗ, ಅಧಿಕಾರಿಗಳ ಪ್ರತಿಭಟನೆ

ಹುಬ್ಬಳ್ಳಿ: ಚುನಾವಣಾ ಆಯೋಗದ ನಿರ್ಲಕ್ಷ್ಯಕ್ಕೆ ಚುನಾವಣಾಧಿಕಾರಿಗಳೇ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಾಳೆ ಕುಂದಗೋಳ ಕ್ಷೇತ್ರದಲ್ಲಿ ಉಪ ಚುನಾವಣೆ ಮತದಾನ ನಡೆಯಲಿದೆ. ಈ ಹಿನ್ನೆಲೆಯ ಕುಂದಗೋಳದ ಹರಭಟ್ಟ ಕಾಲೇಜಿಗೆ ಚುನಾವಣಾ ಕಾರ್ಯಕ್ಕಾಗಿ ಆಮಿಸಿರುವ ಅಧಿಕಾರಿಗಳಿಗೆ ಚುನಾವಣಾ ಆಯೋಗ ಊಟದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಂದಗೋಳ ತಾಲೂಕು ಚುನಾವಣಾಧಿಕಾರಿ‌ ವಿ.ಪ್ರಸನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv