ಚುನಾವಣಾಧಿಕಾರಿಗಳಿಂದ ಡಿ.ವಿ ಸದಾನಂದಗೌಡ ಕಾರ್​​​ ತಪಾಸಣೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಅವರ ಕಾರನ್ನು ಚುನಾವಣಾಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸದಾನಂದಗೌಡ ಮತಬೇಟೆಗೆ ತೆರಳುತ್ತಿದ್ದ ವೇಳೆ ದೊಡ್ಡಗೊಲ್ಲರಹಟ್ಟಿ ಬಳಿ ಅಧಿಕಾರಿಗಳು ವಾಹನವನ್ನ ಪರಿಶೀಲಿಸಿದ್ರು. ಕಾರಿನಲ್ಲಿ ಯಾರು ಯಾರು ಇದ್ದಾರೆ, ಕಾರಿನ ನೋಂದಣಿ ಸಂಖ್ಯೆ, ಪ್ರಚಾರಕ್ಕೆ ಸಿಗುವ ಪರವಾನಗಿ ಸರಿ ಇದೆಯೇ ಎಂದು ಅಧಿಕಾರಿಗಳು ಪರಿಶೀಲನೆ ಮಾಡಿದ್ರು. ಈ ವೇಳೆ ಅಧಿಕಾರಿಗಳು ಕಾರಿನ ದೃಶ್ಯಗಳನ್ನ ಚಿತ್ರೀಕರಿಸಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv