ನಾಮಪತ್ರ ಸಲ್ಲಿಸಿದ ಸಿ.ಎಂ ಉದಾಸಿ

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಂ ಉದಾಸಿ ಇಂದು ನಾಮಪತ್ರ ಸಲ್ಲಿಸಿದರು. ಮೂರುಸಾವಿರ ಮಠದಿಂದ ತಹಶೀಲ್ದಾರ್​​​​ ಕಚೇರಿವರಿಗೆ ಬೈಕ್​ ರ್ಯಾಲಿ ಮೂಲಕ ಮೆರವಣಿಗೆ ನಡೆಸಿ, ಬೆಂಬಲಿಗರೊಂದಿಗೆ ಹಾನಗಲ್ ಉಪ ವಿಭಾಗಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಿ.ಎಂ ಉದಾಸಿಗೆ ಪುತ್ರ, ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಸಾಥ್​​​​​​​​ ನೀಡಿದರು. ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್​​ನ ಮನೋಹರ ತಹಶಿಲ್ದಾರ್‌ ವಿರುದ್ಧ ಉದಾಸಿ ಸೋಲು ಕಂಡಿದ್ದರು.

ಓಲೇಕಾರರಿಂದ ನಾಮಪತ್ರ ಸಲ್ಲಿಕೆ
ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ನೇಹರು ಓಲೇಕಾರ ಇಂದು ನಾಮಪತ್ರ ಸಲ್ಲಿಸಿದರು. ನಗರದ ಮುರುಘಾ ಮಠದಿಂದ ಮೆರವಣಿಗೆ ಪ್ರಾರಂಭಿಸಿ ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *