ಚುನಾವಣೆ ಹಿನ್ನೆಲೆ ಖಾಸಗಿ ಬಸ್​ ಪ್ರಯಾಣ ದರ ದಿಢೀರ್​ ಏರಿಕೆ..!

ಬೆಂಗಳೂರು: ಇದೆ 18 ರಂದು ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಇಂದಿನಿಂದಲೇ ಖಾಸಗಿ ಬಸ್ ಪ್ರಯಾಣ ದರವನ್ನ ದಿಢೀರ್ ಏರಿಕೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ಬಸ್​​ಗಳನ್ನ ಚುನಾವಣಾ ಸಿಬ್ಬಂದಿ ಹಾಗೂ ಮತ ಯಂತ್ರಗಳನ್ನ ಕೊಂಡೊಯ್ಯಲು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಖಾಸಗಿ ಬಸ್​ಗಳು ಇಂದಿನಿಂದಲೇ ಪ್ರಯಾಣ ದರವನ್ನ ದಿಢೀರ್​ ಏರಿಕೆ ಮಾಡಿವೆ. ₹500 ರಿಂದ ₹700 ರೂಪಾಯಿ ಇದ್ದ ಬಸ್​ ಟಿಕೆಟ್​​ ಬೆಲೆ ದಿಢೀರನೆ ₹1300 ರಿಂದ ₹1800ಕ್ಕೆ ಏರಿಕೆಯಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv