ಎಲೆಕ್ಷನ್​ ಎಫೆಕ್ಟ್​: ರೈತನ ಪಾಡು ಕೇಳೋರಿಲ್ಲ..!

ಯಾದಗಿರಿ: ಗಿರಿಗಳ ನಾಡು ಯಾದಗಿರಿಯ ಹಿಂಗಾರು ಋತುವಿನ ಪ್ರಮುಖ ಬೆಳೆ ಭತ್ತ. ಇಲ್ಲಿ ಶೇ. 85 ರಷ್ಟು ರೈತರು ಭತ್ತ ಬೆಳೆಯುತ್ತಾರೆ. ಸಾಲ ಮಾಡಿ ಕಷ್ಟಪಟ್ಟು ಭತ್ತ ಬೆಳೆದ ರೈತರು ರಾಶಿ ಮಾಡಿ ಒಣಗಿಸಿ ಇನ್ನೇನು ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲೇ ಚುನಾವಣೆ ಬಂದಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದ ಭತ್ತ ಖರೀದಿಗೆ ಯಾರೂ ಮುಂದೆ ಬರಲಿಲ್ಲ.
ಈಗ ಚುನಾವಣೆ ಮುಗಿದು ಹಿಂಗಾರು ಕಳೆದು ಮುಂಗಾರು ಮರಳುವ ಸಮಯ ಬಂದ್ರೂ ಕೂಡ ಭತ್ತ ಖರೀದಿಸಲು ಯಾರೂ ಸಿದ್ಧರಿಲ್ಲ. ಚುನಾವಣೆಗೆ ಮೊದಲು ಒಂದು ಕ್ವಿಂಟಾಲ್ ಭತ್ತಕ್ಕೆ ಸುಮಾರು 1,400 ರೂಪಾಯಿಂದ 1,500 ರೂಪಾಯಿ ಇದ್ದ ಬೆಲೆ ಈಗ ಕೇವಲ 900 ರೂಪಾಯಿಂದ 1,000 ರೂಪಾಯಿಗೆ ದಿಢೀರನೆ ಕುಸಿದಿದೆ. ಇದರಿಂದ ಭತ್ತ ಬೆಳೆದ ರೈತರು ಕಂಗಾಲಾಗಿದ್ದು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತಿದ್ದಾರೆ. ಈಗಲಾದ್ರು ದಲ್ಲಾಳಿಗಳಾಗಲಿ, ಸರ್ಕಾರಿ ಖರೀದಿ ಕೇಂದ್ರಗಳಾಗಲಿ ರೈತರ ನೊವಿಗೆ ಸ್ಪಂದಿಸುತ್ತಾರೊ ಕಾದು ನೊಡಬೇಕು. ಒಟ್ಟಿನಲ್ಲಿ 2018ರ ವಿಧಾನಸಭಾ ಚುನಾವಣೆ ಎಲ್ಲ ರಾಜಕಾರಣಿಗಳ ನಿದ್ದೆಗೆಡಿಸಿದ್ದಲ್ಲದೆ ರೈತ ಬೆಳೆಗೊ ಮಾರಕವಾಯಿತಾ? ಎಂಬುದು ರೈತರ ಪ್ರಶ್ನೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv