ಸಾಧ್ವಿ ಪ್ರಗ್ಯಾ ವಿರುದ್ಧ ಎಫ್​ಐಆರ್​: ಚುನಾವಣಾ ಆಯೋಗ

ಬೋಪಾಲ್​: ಈಗಾಗಲೇ ಹುತಾತ್ಮ ಪೊಲೀಸ್​ ಅಧಿಕಾರಿ ಹೇಮಂತ್​ ಕರ್ಕರೆ ನನ್ನ ಶಾಪದಿಂದಲೇ ಸಾಯುವಂತಾಯ್ತು ಎಂಬಂತಹ ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್​ ನೀಡಿದ್ದ ಸ್ಪಷ್ಟನೆ ಬಗ್ಗೆ ಚುನಾವಣಾ ಆಯೋಗ ತೃಪ್ತಿಯಾಗಿಲ್ಲ. ಈ ಬಗ್ಗೆ ಇನ್ನೊಮ್ಮೆ ವಿಚಾರಣೆಗೆ ಚಿಂತನೆ ನಡೆಸ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗ ಇದೀಗ ಸ್ವಾಧ್ವಿ ವಿರುದ್ಧ ಎಫ್​ಐಆರ್​ ದಾಖಲಿಸಿದೆ.
ಅಯೋಧ್ಯೆಯಲ್ಲಿ ರಾಮ್​ ಮಂದಿರವನ್ನು ನಿರ್ಮಿಸುತ್ತೇವೆ. ನಾವು ಗೋಪುರವನ್ನು ಉರುಳಿಸಲು ಹೋಗಿದ್ವಿ, ಗೋಪುರದ ಮೇಲೆ ಹತ್ತಿ ನಾನು ಅದನ್ನು ಉರುಳಿಸಿದೆ. ನನಗೆ ಈ ವಿಷ್ಯದಲ್ಲಿ ಹೆಮ್ಮೆ ಇದೆ ಅಂತಾ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಇತ್ತಿಚೆಗೆ ಹೇಳಿದ್ದರು. ಈ ಸಂಬಂಧ ಇದೀಗ ಚುನಾವಣಾ ಆಯೋಗ ಭೋಪಾಲ್​ನ ಟಿಟಿ ನಗರ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದೆ. ಟಿಟಿ. ನಗರದ ಸಬ್​ ಡಿವಿಷನಲ್ ಮ್ಯಾಜಿಸ್ಟ್ರೇಟ್​ ಸಂಜಯ್​ ಶ್ರೀವಾಸ್ತವ್​ ನೀತಿಸಂಹಿತೆ ಉಲ್ಲಂಘನೆ ವಿರುದ್ಧ ಎಫ್ಐಆರ್​ ದಾಖಲಿಸಲಾಗಿದೆ ಅಂತಾ ಸ್ಪಷ್ಟಪಡಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv