ಯೋಗಿ, ಮಾಯಾ, ಆಜಂಖಾನ್​ ಬಳಿಕ ಇದೀಗ ಸಿಧು ಬಾಯಿಗೆ ಬೀಗ!

ದೆಹಲಿ: ಸುಪ್ರೀಂಕೋರ್ಟ್​ನ ತರಾಟೆ ಬಳಿಕ ಕೇಂದ್ರ ಚುನಾವಣಾ ಆಯೋಗ ಇದೀಗ ಸಖತ್​ ಸ್ಟ್ರಾಂಗ್​ ಆಗ್ತಿದೆ ಎಂದೆನಿಸ್ತಿದೆ. ಯಾಕೆಂದ್ರೆ ಚುನಾವಣಾ ಪ್ರಚಾರದ ಅಖಾಡದಲ್ಲಿ ಅಬ್ಬರ ಮಾತಿನ ಜೊತೆ ನಾಲಿಗೆ ಹರಿಬಿಡ್ತಿರೋ ನಾಯಕರಿಗೆ ಆಯೋಗದ ಅಧಿಕಾರಿಗಳು ರೆಡ್ ಕಾರ್ಡ್​ ತೋರಿಸ್ತಿದ್ದಾರೆ. ಈ ಹಿಂದೇ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​, ಬಿಎಸ್​ಪಿಯ ಮಾಯಾವತಿ, ಬಿಜೆಪಿಯ ಮನೇಕಾ ಗಾಂಧಿ, ಎಸ್​ಪಿಯ ಆಜಂಖಾನ್​ಗೆ ಚುನಾವಣಾ ಪ್ರಕ್ರಿಯೆಗಳಿಂದ ನಿಷೇಧ ಹೇರಿ ಆದೇಶ ಹೊರಡಿಸಿದ್ದ ಚುನಾವಣಾ ಅಧಿಕಾರಿಗಳು ಇದೀಗ ನವಜೋತ್​ ಸಿಂಗ್​ ಸಿಧು ವಿರುದ್ಧ ಅದೇ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಈ ಸಂಬಂಧ ಯಾವುದೇ ರೀತಿಯ ಸಾರ್ವಜನಿಕ ಱಲಿ, ಭಾಷಣ, ರೋಡ್​ ಶೋ ನಡೆಸದಂತೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡದಂತೆ 72 ಗಂಟೆಗಳ ಕಾಲ ನಿಷೇಧವನ್ನು ಹೇರಿದೆ. ಈ ನಿರ್ಬಂಧವೂ ಇವತ್ತು ಬೆಳಗ್ಗೆ ಹತ್ತು ಗಂಟೆಯಿಂದ ಆರಂಭವಾಗಲಿದೆ. ಏಪ್ರಿಲ್​ 16 ರಂದು ಬಿಹಾರ್​ನ ಕಟಿಹಾರ್​ ಕ್ಷೇತ್ರದಲ್ಲಿ ಮುಸ್ಲಿಮ್​ ಮತದಾರರ ಬಳಿ ಮೋದಿಯನ್ನು ಬ್ಲಾಕ್​ ಮಾಡೋದಕ್ಕೆ , ಕಾಂಗ್ರೆಸ್​ಗೆ ವೋಟ್​ ಹಾಕಿ ಅಂತಾ ಸಿಧು ಕರೆಕೊಟ್ಟಿದ್ರು. ಈ ಹೇಳಿಕೆ ಸಂಬಂಧ ಇದೀಗ ಆಯೋಗ ಸಿಧುಗೆ ತಾತ್ಕಾಲಿಕ ನಿಷೇಧ ಹೇರಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv