ನೀತಿಸಂಹಿತೆ ಉಲ್ಲಂಘನೆ ‌ಆರೋಪ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕೇಸ್​ ದಾಖಲು

ಬೆಳಗಾವಿ: ತಮಗೆ ಸಂಬಂಧ ಇಲ್ಲದ‌ ಮತಗಟ್ಟೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅನುಮತಿ‌ ಇಲ್ಲದೇ‌  ಪ್ರವೇಶ ಮಾಡಿದ್ದರು ಎಂಬ ನೀತಿಸಂಹಿತೆ ಉಲ್ಲಂಘನೆ ‌ಆರೋಪದಡಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇಂದು ಬೆಳಗಾವಿಯ ವಿಜಯನಗರದ ಮತಗಟ್ಟೆಯಲ್ಲಿ  ಲಕ್ಷ್ಮಿ ಹೆಬ್ಬಾಳ್ಕರ್ ಮತಯಾಚನೆ ‌ಮಾಡಿದ್ದರು.  ಈ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಎಂಸಿಸಿ ಫ್ಲೈಯಿಂಗ್ ಸ್ಕ್ವಾಡ್ ವಿಭಾಗದ ಅಧಿಕಾರಿಗಳಾದ ನಿತೀಶ್ ಕಾಪಸಿ‌ ಹಾಗೂ ಜಯಚಂದ್ರ ಪಾಟೀಲ್ ಕ್ಯಾಂಪ್ ‌ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv