ಅಯ್ಯಯ್ಯೋ ನಮಗಾದ್ರೂ ಸಿಕ್ಕಿದ್ರೆ ಆಮ್ಲೆಟ್‌ ಆದ್ರೂ ಮಾಡ್ತಿದ್ವಲ್ಲಾ..!

ಮೊಟ್ಟೆ.. ಎಷ್ಟೋ ಜನರ ಫೇವರಿಟ್‌ ಫುಡ್‌.. ಆಮ್ಲೆಟ್‌, ಎಗ್‌ರೈಸ್‌, ಎಗ್‌ಬುರ್ಜಿ, ಎಗ್‌ ಬೋಂಡಾ ಇನ್ನೂ ಏನೇನೋ ಐಟಮ್‌ ಮಾಡಿ ಅದನ್ನ ಸವೀತಾರೆ. ಆದ್ರೆ ಎಗ್‌ಪ್ರಿಯರಿಗೆ ಇಲ್ಲೊಂದು ಸ್ಯಾಡ್‌ ನ್ಯೂಸ್‌ ಇದೆ. ನಾವು ರಸ್ತೆಯಲ್ಲಿ ಹೋಗಬೇಕಾದ್ರೆ ಕೈಯಲ್ಲಿದ್ದ ಮೊಟ್ಟೆ ಮಿಸ್ಸಾಗಿ ಕೆಳಕ್ಕೆ ಬಿದ್ರೂ ಬಾಯಿ ಬಾಯಿ ಬಡ್ಕೋತೀವಿ. ಆದ್ರೆ ಚೈನಾದಲ್ಲಿ ಮೊಟ್ಟೆ ಸಾಗಿಸ್ತಿದ್ದ ಟ್ರಕ್‌ ಪಲ್ಟಿ ಹೊಡೆದಿದೆ. ಮೊಟ್ಟೆಗಳೆಲ್ಲಾ ಅಪ್ಪಚ್ಚಿಯಾಗಿ ಆಮ್ಲೆಟ್‌ ಆಗಿಬಿಟ್ಟಿವೆ.

ಅಪ್ಪಚ್ಚಿಯಾಯ್ತು 1 ಲಕ್ಷ ಮೊಟ್ಟೆ..!
ಚೈನಾದ ಹ್ಯಾಂಗ್ಝೌ-ಜಿಂಗ್ಡಿಜೆನ್ ಹೈವೇ ಬಳಿ ಮೊಟ್ಟೆ ಸಾಗಿಸ್ತಿದ್ದ ಟ್ರಕ್​ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಪರಿಣಾಮ ಅದರೊಳಗಿದ್ದ ಅಷ್ಟೂ ಮೊಟ್ಟೆಗಳು ರೋಡಲ್ಲಿ ಬಿದ್ದು ಹಾಳಾಗಿವೆ. ಅಷ್ಟಕ್ಕೂ ರಸ್ತೆಗೆ ಬಿದ್ದು ಹಾಳಾದ ಮೊಟ್ಟೆಗಳ ಸಂಖ್ಯೆ ಎಷ್ಟು ಗೊತ್ತಾ? ನೂರಲ್ಲ, ಸಾವಿರ ಅಲ್ಲ ಸುಮಾರು 1 ಲಕ್ಷ ಮೊಟ್ಟೆಗಳು. ಮೊಟ್ಟೆಯೊಳಗಿದ್ದ ಲಿಕ್ವಿಡ್‌ ಸುಮಾರು 12ಮೀಟರ್​ನಷ್ಟು ರಸ್ತೆಯಲ್ಲಿ ಹರಡಿತ್ತು. ಇದನ್ನ ಶುಚಿಗೊಳಿಸಲು ಸಿಬ್ಬಂದಿಗೆ ಸುಮಾರು 2ಗಂಟೆ ಸಮಯ ಹಿಡೀತಂತೆ. ಯಾವುದೇ ಪ್ರಾಣಹಾನಿ ಸಂಭವಿಸದೇ ಇದ್ರೂ ಮೊಟ್ಟೆ ಮಾಲೀಕನಿಗೆ ಮಾತ್ರ ಸುಮಾರು 8 ಲಕ್ಷ ರೂಪಾಯಿ ನಷ್ಟವಾಗಿದೆ.

ವಿಶೇಷ ಬರಹ: ಬಿ.ಆರ್.ಅರ್ಪಿತ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv