ದಿನಕ್ಕೊಂದು ಮೊಟ್ಟೆ ಸೇವನೆಯಿಂದ ಹೃದಯ ಸಮಸ್ಯೆಗಳ ಪ್ರಮಾಣ ಶೇ 18ರಷ್ಟು ಇಳಿಕೆ..!

ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳು ಶೇ.18ರಷ್ಟು ಕಡಿಮೆ ಆಗುತ್ತದೆ ಎಂದು ಚೀನಾದ ಸಂಶೋಧನಾ ವರದಿಯೊಂದು ತಿಳಿಸಿದೆ. 4 ಲಕ್ಷ ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ವರದಿ ಬಹಿರಂಗವಾಗಿದೆ.

ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಶೇ.18ರಷ್ಟು ಹೃದಯ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ, ಮೊಟ್ಟೆ ಸೇವಿಸದವರಲ್ಲಿ ಹೃದಯ ಸಮಸ್ಯೆ ಹಾಗೂ ಪಾರ್ಶ್ವವಾಯು ಹೆಚ್ಚಾಗಿರುತ್ತದೆ ಎಂದು ಆರೋಗ್ಯಕ್ಕೆ ಸಂಬಂಧಿಸಿದ ಸಂಶೋಧನಾ ವರದಿಯನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ರಕ್ತದೊತ್ತಡದಿಂದ ತೂಕ ಹೆಚ್ಚಳ ಹಾಗೂ ಬೊಜ್ಜು ಸಂಗ್ರಹವಾಗುತ್ತದೆ. ಅಲ್ಲದೇ ದೇಹದಲ್ಲಿನ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರಿಂದ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಮೊಟ್ಟೆ ಸೇವನೆ ಬಗ್ಗೆ ವೈದ್ಯರಿಂದ ವಿವಿಧಾತ್ಮಕ ಹೇಳಿಕೆಗಳು:
ಈ ಹಿಂದೆ ಅತಿಯಾದ ಮೊಟ್ಟೆ ಸೇವನೆ ಮಾಡಬೇಡಿ ಎಂದು ರೋಗಿಗಳಿಗೆ ವೈದ್ಯರು ತಿಳಿಸಿದ್ದರು. ಮೊಟ್ಟೆಯಲ್ಲಿ ಅಧಿಕ ಪ್ರೋಟಿನ್​​, ಸಕಾರಾತ್ಮಕ ಪೌಷ್ಟಿಕಾಂಶದ ಅಂಶಗಳು ಹೊಂದಿರುತ್ತವೆ. ಅಲ್ಲದೇ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್​​ ಅಂಶ ಮೊಟ್ಟೆಗಳು ಹೊಂದಿರುವುದರಿಂದ ಇದನ್ನು ಹಾನಿಕಾರಕ ಎಂದು ವೈದ್ಯರು ಭಾವಿಸಿದ್ದರು ಎಂದು ಸಂಶೋಧಕ ಬೀಜಿಂಗ್​ನ ಪೆಕಿಂಗ್​ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಕ್ಯಾನ್ಕಿಂಗ್​​ ವಿವರಿಸಿದ್ದಾರೆ. ​​
ಈ ಹಿಂದೆ ಮಾಡಿದ್ದ ಅಧ್ಯಯನವೂ ಸೀಮಿತ ಸಾಕ್ಷ್ಯಗಳನ್ನು ಚೀನಾ ಜನಸಂಖ್ಯೆಗೆ ಅನುಗುಣವಾಗಿ ಹೊಂದಿತ್ತು. ಆದರೆ, ಈಗ ಜೀವನ ಶೈಲಿಗಳು ಬದಲಾಗಿವೆ. ಈ ಹಿಂದೆ ಇದ್ದಂತಹ ಜೀವನ ಕ್ರಮಕ್ಕೂ ಈಗಿನ ಜೀವನಕ್ಕೂ ವಿಶಾಲವಾದ ಬದಲಾವಣೆಯಿದೆ. ಹಾಗಾಗಿ ರೋಗಗಳ ಲಕ್ಷಣಗಳು ಕೂಡ ಬದಲಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಅರ್ಧ ಮಿಲಿಯನ್​​​ನಷ್ಟು ಚೀನಾದ 10 ಪ್ರದೇಶದ ವಯಸ್ಕರ ಮೇಲೆ ನಡೆಸಿದ ಅಧ್ಯಯನದಿಂದ ಸಂಶೋಧಕರಿಗೆ ಈ ಮಾಹಿತಿ ಸಿಕ್ಕಿದೆ. ಇದರಲ್ಲಿ 4,16,213 ಮಂದಿ ಸಂಶೋಧನೆಗೆ ಒಳಪಟ್ಟಿದ್ದರು. ಇದರಲ್ಲಿ ಶೇ.13ರಷ್ಟು ವಯಸ್ಕರು 30-79 ವಯಸ್ಸಿನವರು. 9 ವರ್ಷಗಳ ವರೆಗೆ ಈ ಸಂಶೋಧನೆ ನಡೆಸಲಾಗಿತ್ತು. ಮುಖ್ಯವಾಗಿ ಹೃದಯಘಾತ, ಪಾರ್ಶುವಾಯುಗಳಂತಹ ರೋಗಗಳ ಮೇಲೆ ನಿಗಾ ಇಡಲಾಗಿತ್ತು. ಹೃದಯಸಮಸ್ಯೆಗಳು ಹೆಚ್ಚಾಗಿ ಚೀನಾದಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಸಂಶೋಧಕ ಹೇಳಿದ್ದಾರೆ. ವರದಿ ಪ್ರಕಾರ 9.985 ಮಂದಿ ಹೃದಯಸಂಬಂಧಿಸಿದ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ವರದಿಯನ್ನು ವಿಶ್ಲೇಷಣೆ ಮಾಡಿದಾಗ, ಸಾಮಾನ್ಯವಾಗಿ ಮೊಟ್ಟೆ ಸೇವನೆಯಿಂದ ಹೃದಯಕಾಯಿಲೆಗಳು ಬರುವುದಿಲ್ಲ ಎಂದು ಸಂಶೋಧನಕಾರರು ಹೇಳುತ್ತಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv