ಟಿಫನ್ ಬಿಟ್ರೆ ಟೈಪ್​​-2 ಡಯಾಬಿಟಿಸ್.. ಅಷ್ಟೇ ಅಲ್ಲ ವಂಶಾವಳಿ ಮೇಲೂ ಎಫೆಕ್ಟ್​..!

ಟೈಮ್​ ಟು ಟೈಂ ಊಟ, ತಿಂಡಿ, ನಿದ್ರೆ ಮಾಡಿದ್ರೆನೇ ಹೆಲ್ದಿ ಜೀವನ. ಊಟ, ತಿಂಡಿ ಬಿಟ್ರೆ ಆರೋಗ್ಯದ ಕತೆ ಅಷ್ಟೇ. ಆದ್ರೆ ಅದೆಷ್ಟೋ ಮಂದಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ. ಅದ್ರಲ್ಲೂ ಹೊತ್ತು, ಗೊತ್ತು ಇಲ್ಲದೇ ಆಹಾರ ಸೇವನೇ ಮಾಡೋರೇ ಹೆಚ್ಚು. ಸಾಮಾನ್ಯವಾಗಿ ಬೆಳಗ್ಗೆ ಎದ್ದ ಕೂಡಲೇ ಕಾಫಿನೋ, ಟೀನೋ ಕುಡಿದು ಬಿಟ್ರೆ ಬೆಳಗಿನ ಉಪಹಾರ ಮುಗಿಯಿತು.. ಆಮೇಲೆ ಮಧ್ಯಾಹ್ನ 12 ಗಂಟೆಗೋ, 1 ಗಂಟೆಗೋ ಊಟಾನೋ, ತಿಂಡಿನೋ ಮಾಡಿದ್ರೆ ಆಯ್ತು ಅಂದ್ಕೊಳ್ಳೋರೇ ಹೆಚ್ಚು.. ಒಂದು ವೇಳೆ ನೀವು ಏನಾದ್ರೂ ಹಾಗೇ ಮಾಡ್ತಿದ್ರೆ ಹುಷಾರ್! ಯಾಕಂದ್ರೆ ಮುಂಜಾನೆಯ ಟಿಫನ್ ಬಿಟ್ರಿ ಅಂದ್ರೆ ನಿಮ್ ಕತೆ ಅಷ್ಟೇ ಅಂತಾ ಜರ್ಮನ್ ಸಂಶೋಧಕರು ಎಚ್ಚರಿಸಿದ್ದಾರೆ!

ಇತ್ತೀಚೆಗೆ ಜರ್ಮನ್​ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಬೆಳಗಿನ ಟಿಫನ್​ ಮಾಡಲಿಲ್ಲ ಅಂದ್ರೆ ಟೈಪ್-2 ಡಯಾಬಿಟಿಸ್​ಗೆ  ತುತ್ತಾಗುವ ಸಾಧ್ಯತೆ ಇದೆ ಅಂತಾ ಹೇಳಿದೆ. 96,000 ಸಾವಿರ ಜನರ ಮೇಲೆ ನಡೆಸಲಾದ ಅಧ್ಯಯನದ ಪ್ರಕಾರ, ವಾರದಲ್ಲಿ ಒಮ್ಮೆ ತಿಂಡಿ ​ ತಿನ್ನಲಿಲ್ಲ ಎಂದರೆ ಶೇಕಡ 6%ರಷ್ಟು ಟೈಪ್​- 2 ಡಯಾಬಿಟೀಸ್​ಗೆ​ ತುತ್ತಾಗುವ ಚಾನ್ಸ್​ ಇದೆ. ನಾಲ್ಕರಿಂದ ಐದು ಬಾರಿ ಬೆಳಗ್ಗಿನ ತಿಂಡಿ ಬಿಟ್ಟರೆ ಶೇಕಡ 55%ರಷ್ಟು ಮಂದಿ ಟೈಪ್​ 2 ಡಯಾಬಿಟಿಸ್​​ಗೆ ತುತ್ತಾಗುವ ಸಾಧ್ಯತೆ ಇದೆ ಅನ್ನೋ ಅಧ್ಯಯನದ ವರದಿಯನ್ನ  journal of nutrition ಮ್ಯಾಗಜಿನ್ ಪ್ರಕಟಿಸಿದೆ.

ಟೈಪ್-2 ಡಯಾಬಿಟಿಸ್​ನಿಂದ ಜನರಲ್ಲೂ ತೂಕ ಹೆಚ್ಚಾಗುವಿಕೆ ಮತ್ತು ಆಲಸ್ಯತನ ಹೆಚ್ಚಾಗುತ್ತದೆ. ಜೊತೆಗೆ ಟೈಪ್​-2 ಡಯಾಬಿಟಿಸ್​ ನಮ್ಮ ವಂಶಾವಳಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಲ್ಲದೇ ಬೆಳಗ್ಗೆ ಟಿಫನ್​ ತಪ್ಪಿಸುವುದು ಹೆಚ್ಚು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು ಅಂತಾ ಅಮೆರಿಕಾದ ಒಹಿಯೋ ವಿವಿಯ ಡಯಟೀಷಿಯನ್ ಜೆನ್ನ ಫ್ರೀಮನ್​ ತಿಳಿಸಿದ್ದಾರೆ.